About the Author

ಡಾ. ಟಿ. ಎಂ. ಶಿವಾನಂದಯ್ಯ ರವರು 1936ರಲ್ಲಿ ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕೊಟ್ಟೂರು ಪಟ್ಟಣದಲ್ಲಿ ಜನಿಸಿದರು. ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ 1954-1958 ರವರೆಗೆ ಆಯುರ್ವೇದ ವಿದ್ವಾನ್ ಎಲ್.ಎ.ಎಂ.ಎಸ್. ವೈದ್ಯಕೀಯ ಪದವಿಯನ್ನು ಪಡೆದು, ಹೊಳೆಹೊನ್ನೂರು ಮತ್ತು ಶಿವಮೊಗ್ಗ ನಗರದಲ್ಲಿ ಎರಡೂ ಕಡೆ ‘ಪ್ರಕಾಶ್ ಕ್ಲಿನಿಕ್’ ನಡೆಸುತ್ತಿದ್ದರು. ಹಾಗೆ ಆಯುರ್ವೇದ ಔಷಧ ತಯಾರಿಕಾ ಘಟಕ ಪ್ರಕಾಶ್ ಫಾರ್ಮಸೂಟಿಕಲ್ಸ್ ಎಂಬ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಔಷಧ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ನಿರತರಾಗಿದ್ದು, ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ವೃತ್ತಿಗೆ ಸಂಬಂಧಿಸಿದಂತೆ ಹಲವಾರು ಉಪಯುಕ್ತ ವೈದ್ಯಕೀಯ ಲೇಖನಗಳನ್ನು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಇವರ ನಿರಂತರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳಲ್ಲದೆ, ಬಾಳೆಹೊನ್ನೂರು ಮತ್ತು ಕೇದಾರ ಜಗದ್ಗುರುಗಳಿಂದ ‘ವೃತ್ತಿಶ್ಚೈತನ್ಯ ರತ್ನ’ ಬಿರುದು ಪಡೆದಿದ್ದಾರೆ.

ಟಿ. ಎಂ. ಶಿವಾನಂದಯ್ಯ