‘ಒತ್ತಡದ ಬೇನೆಗಳು’ ಕೃತಿಯು ಅನುಪಮಾ ನಿರಂಜನ ಅವರ ಆರೋಗ್ಯ ಕುರಿತಾದ ಲೇಖನಗಳನ್ನು ಒಳಗೊಂಡಿದೆ. ಅನುಪಮಾ ನಿರಂಜನ ಅವರು ಕೃತಿಯ ಕುರಿತು ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ : ಆಧುನಿಕ ಜಗತ್ತಿನ ಅನೇಕ ಒತ್ತಡಗಳಿಂದಾಗಿ ಪ್ರತಿ ವ್ಯಕ್ತಿಗೂ ಆತುರ, ಆಂತಕ, ಕಾತರಗಳು ಇತ್ತಿಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿವೆ. ಮನಸ್ಸಿನ ಈ ಭಾವೋದ್ವೇಗಗಳು ದೇಹದ ಮೇಲು ಅನೇಕ ಅಪಾಯಕಾರೀ ಪರಿಣಾಮಗಳನ್ನುಂಟು ಮಾಡುತ್ತಿವೆ. ಸೌಮ್ಯ ಸ್ವರೂಪದ ನಿದ್ರಾನಾಶದಿಂದ ಹಿಡಿದು, ಹೃದಯಾಘಾತದಂತಹ ತೀವ್ರ ಸ್ವರೂಪದ ತೊಡಕುಗಳಿಗೂ ಒತ್ತಡ ಕಾರಣ ಆಗಬಹುದು ಈ ಬಗ್ಗೆ ಅರಿವನ್ನು ಪಡೆಯುವುದು ಮತ್ತು ಅವುಗಳ ನಿವಾರಣೆಯತ್ತ ಆಲೋಚನೆ ಮಾಡುವುದು ಇಂದು ಜರೂರಾಗಿ ಆಗಬೇಕಾದ ಕೆಲಸ ಆ ಕಾರ್ಯಕ್ಕೆ ನೆರವಾಗುವಂತಹುದು ಈ ಹೊತ್ತಗೆ.ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನ ಮಾಲೆಯು ‘ಒತ್ತಡದ ಬೇನೆಗಳು’ ಸಂಕಲನವಾಗಿದೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE