ಲೇಖಕ ಎಂ.ಜೆ.ಸುಂದರ್ ರಾಮ್ ಅವರ ‘ನೋಬೆಲ್ ವಂಚಿತ ಭಾರತದ ವೈದ್ಯ ವಿಜ್ಞಾನಿಗಳು’ ಪುಸ್ತಕವು ಇಪ್ಪತ್ತನೆಯ ಶತಮಾನದಲ್ಲಿ ಬ್ರಿಟೀಷರ ಗುಲಾಮಗಿರಿಯಲ್ಲಿದ್ದ ಭಾರತದ ವೈದ್ಯ ವಿಜ್ಞಾನಿಗಳ ಮಾಹಿತಿಯನ್ನು ಹೊತ್ತು ತಂದಿದೆ. ಪುಸ್ತಕವನ್ನು ಮೂರು ಅಧ್ಯಾಯಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ಅಧ್ಯಾಯ ಸರ್ ಉಪೇಂಧ್ರನಾಥ್ ಬ್ರಹ್ಮಚಾರಿ, ಎರಡನೇ ಅಧ್ಯಾಯವು ಯಾರಿವರು, ನೊಬೆಲ್?, ಮೂರನೇ ಅಧ್ಯಾಯದಲ್ಲಿ ಸುಭಾಶ್ ಮುಖ್ಯೋಪಾಧ್ಯಾಯ ಎಂಬಂತೆ ರಚಿಸಲಾಗಿದೆ.
ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...
READ MORE