ನಮ್ಮ ಶರೀರ ಅದರ ರಕ್ಷಣೆ

Author : ಸಿ.ಆರ್. ಯರವಿನತೆಲಿಮಠ

Pages 140

₹ 70.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಮಾನವ ಎಚ್ಚರವಾಗಿರುವಾಗಲೂ, ನಿದ್ರಿಸುತ್ತಿರುವಾಗಲೂ ತನ್ನ ಕೆಲಸ ನಿರ್ವಹಿಸುವ ಹೃದಯ, ಮೂತ್ರಪಿಂಡ, ಜಠರ ಒಂದು ಅಚ್ಚರಿ ಹುಟ್ಟಿಸುವ ಜೈವಿಕ ಯಂತ್ರಗಳು. ಶ್ವಾಸಕೋಶ, ಮಿದುಳು, ಕಣ್ಣು, ಮೂಗು, ಕಿವಿ, ಮೂಳೆ, ರಕ್ತನಾಳಗಳು, ನರಮಂಡಲ, ಚರ್ಮ - ಹೀಗೆ ಒಂದೊಂದು ನಿರ್ದಿಷ್ಟ ಕಾರ್ಯ ನಿರ್ವಹಿಸುವ ಪ್ರತಿಯೊಂದು ಬಹು ಮುಖ್ಯವಾಗಿದೆ. ಒಂದು ಅಂಗದ ಆರೋಗ್ಯ ಏರುಪೇರಾದರು ಆಯುಷ್ಯ ಕಡಿಮೆಯಾದಂತೆ. ನಮ್ಮ ಶರೀರದ ಬಗೆಗೆ ತಿಳಿವಳಿಕೆ, ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವ ಉಪಾಯಗಳನ್ನು ಇಲ್ಲಿ ಲೇಖಕರು ತಿಳಿಸಿದ್ದಾರೆ. ನಮ್ಮ ಅಂಗಾಂಗಗಳನ್ನು ಪೂರ್ಣ ಆರೋಗ್ಯವಾಗಿ ಇರಿಸಿಕೊಳ್ಳುವ ಸವಿವರವು  ಈ ಪುಸ್ತಕದಲ್ಲಿ ಸಿಗುತ್ತದೆ. ಈ ಕೃತಿ 11 ಮುದ್ರಣ ಕಂಡಿದೆ.

About the Author

ಸಿ.ಆರ್. ಯರವಿನತೆಲಿಮಠ
(10 June 1939)

ಅಧ್ಯಾಪಕ, ಸಾಹಿತಿ ಸಿ.ಆರ್.ಯರವಿನತೆಲಿಮಠ ಅವರು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ 1939 ರಲ್ಲಿ ಜನಿಸಿದರು. ಎಂಎ (ಇಂಗ್ಲಿಷ್), ಪಿಎಚ್‌ಡಿ. ವಿಜಯಪುರ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದ ಇವರು ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.”ವಾಸ್ತವವಾದ’ ಎನ್ನುವ ಕೃತಿಯನ್ನು ಎಸ್.ಎಸ್. ದೇಸಾಯಿಯವರ ಜೊತೆಗೂಡಿ ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಜೆಸ್ಟಿಂಗ್ ಜರ್ಮಯ್ಯ ಮತ್ತು ಅಡ್ವೆಂಚರ್‍ ಇನ್ ಟೈಮ್ ಎನ್ನುವ ಎರಡು ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆ ಪಾಶ್ಚಾತ್ಯ ಸಾಹಿತ್ಯ ವಾದಗಳು; ಪಾಶ್ಚಾತ್ಯ ಸಾಹಿತ್ಯ ವಾದಗಳು ಮತ್ತು ಕನ್ನಡ ಸಾಹಿತ್ಯ ಸಂದರ್ಭ; ನವ್ಯ ವಿಮರ್ಶೆ, ಸಾಹಿತ್ಯ ವಿಮರ್ಶೆಯ ಮಾದರಿಗಳು ಭಾಗ 2 ಮತ್ತು 3, ಮಧುರ ಚೆನ್ನ ...

READ MORE

Related Books