ಅಧ್ಯಾಪಕ, ಸಾಹಿತಿ ಸಿ.ಆರ್.ಯರವಿನತೆಲಿಮಠ ಅವರು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ 1939 ರಲ್ಲಿ ಜನಿಸಿದರು. ಎಂಎ (ಇಂಗ್ಲಿಷ್), ಪಿಎಚ್‌ಡಿ. ವಿಜಯಪುರ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದ ಇವರು ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.”ವಾಸ್ತವವಾದ’ ಎನ್ನುವ ಕೃತಿಯನ್ನು ಎಸ್.ಎಸ್. ದೇಸಾಯಿಯವರ ಜೊತೆಗೂಡಿ ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಜೆಸ್ಟಿಂಗ್ ಜರ್ಮಯ್ಯ ಮತ್ತು ಅಡ್ವೆಂಚರ್ ಇನ್ ಟೈಮ್ ಎನ್ನುವ ಎರಡು ಕೃತಿಗಳನ್ನು ರಚಿಸಿದ್ದಾರೆ.
ವಿಮರ್ಶೆ ಪಾಶ್ಚಾತ್ಯ ಸಾಹಿತ್ಯ ವಾದಗಳು; ಪಾಶ್ಚಾತ್ಯ ಸಾಹಿತ್ಯ ವಾದಗಳು ಮತ್ತು ಕನ್ನಡ ಸಾಹಿತ್ಯ ಸಂದರ್ಭ; ನವ್ಯ ವಿಮರ್ಶೆ, ಸಾಹಿತ್ಯ ವಿಮರ್ಶೆಯ ಮಾದರಿಗಳು ಭಾಗ 2 ಮತ್ತು 3, ಮಧುರ ಚೆನ್ನ ದತ್ತಿ ಇವರ ಪ್ರಮುಖ ಕೃತಿಗಳು.
ಶರಣ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಬಸವ ಭೂಷಣ ಪ್ರಶಸ್ತಿ, ಶೂನ್ಯಪೀಠ ಅಲ್ಲಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಯು.ಜಿ.ಸಿ. ಇಮೆರಿಟಸ್ ಪ್ರೊಫೆಸರ್ ಆಗಿರುವ ಅವರಿಗೆ ' ಪ್ರೊ. ಸ.ಸ.ಮಾಳವಾಡ ಪ್ರಶಸ್ತಿ ಸಂದಿವೆ.
ಅಲ್ಲಮನನ್ನು ಕನ್ನಡದಿಂದ ಇಂಗ್ಲೀಷ್ ಭಾಷೆಗೂ ಪರಿಚಯಿಸಿದ ನಾಡಿನ ಖ್ಯಾತ ಲೇಖಕ, ಚಿಂತಕ ಸಿ.ಆರ್. ಯರವಿನತೆಲಿಮಠ ಅವರೊಂದಿಗೆ ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ