ವೃದ್ಧಾಪ್ಯವು ತನ್ನೊಟ್ಟಿಗೆ ಹಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನೂ ಹೇಗೆ ತರುತ್ತದೆ. ಯಾಂತ್ರಿಕ ಬದುಕಿನ ಅನಗತ್ಯ ನಿರ್ಲಕ್ಷ್ಯಕ್ಕೆ ತುತ್ತಾದ ವೃದ್ಧ ಜೀವಗಳನ್ನು ಬಾಧಿಸುವ ಕೆಲ ಸಾಮಾನ್ಯ ವ್ಯಾಧಿಗಳ ಬಗ್ಗೆ ಬೇಕಾದ ಅಗತ್ಯ ಮಾಹಿತಿಯನ್ನು ಲೇಖಕ .ಸಿ.ಜಿ.ಕೇಶವಮೂರ್ತಿಯವರು ಈ ಕೃತಿಯಲ್ಲಿ ನೀಡಿದ್ದಾರೆ. ಸಾಕಷ್ಟು ಅನುಭವವನ್ನು ಹೊಂದಿದ ಇವರು ಮಾನವ ಯಾಂತ್ರೀಕರಣಕ್ಕೆ ಒಳಗಾಗಿ ಯಾವ ರೀತಿಯಲ್ಲಿ ತಮ್ಮ ವೃದ್ಧಾಪದಲ್ಲಿ ತೊಂದರೆಗೆ ಒಳಪಡುತ್ತಾರೆ, ಇವೆಲ್ಲದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್ ಕಾಲೇಜಿನಿಂದ (1974) ಎಂಬಿಬಿಎಸ್ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. . ...
READ MORE