ಗರ್ಭಕೋಶದ ಕಾಯಿಲೆಯು ಸ್ತೀಯರನ್ನು ಹೆಚ್ಚು ಮುಜುಗುರಕ್ಕೆ ಒಳಪಡುವಂತೆ ಮಾಡಿದೆ. ಸ್ತ್ರೀ ಕುಲವನ್ನು ಅಪಾರವಾಗಿ ಬಾಧಿಸುವ ಗರ್ಭಕೋಶ ಸಂಬಂಧಿ ಕಾಯಿಲೆಗಳು ದೀರ್ಘಕಾಲದಿಂದಲೂ ಮಹಿಳೆಯರನ್ನು ಕೊರಗುವಂತೆ ಮಾಡಿದೆ. ಮುಟ್ಟಿನ ದೋಷ, ಗರ್ಭಕೋಶದ ಸೋಂಕು, ನಾರು ಗಡ್ಡೆಗಳು, ಗರ್ಭಕೋಶದ ಕ್ಯಾನ್ಸರ್, ಗರ್ಭಕೋಶದ ಜಾರಿಳಿತ, ಬಿಳಿಮುಟ್ಟು ಹೀಗೆ ನಾನಾ ರೂಪದಲ್ಲಿ ಮಹಿಳೆಯರನ್ನು ಈ ಕಾಯಿಲೆಯು ಭಾದಿಸುತ್ತದೆ. ಈ ಎಲ್ಲಾ ವಿಷಯಗಳನ್ನು ಮನಗಂಡ ಡಾ|| ಗಿರಿಜಮ್ಮನವರು ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ,ಅತ್ಯಂತ ಸರಳ ಮತ್ತು ಸ್ಪಷ್ಟವಾಗಿ ಗರ್ಭಕೋಶದ ಕಾಯಿಲೆಯ ಚಿಕಿತ್ಸೆಯ ಬಗ್ಗೆ ಈ ಕೃತಿಯಲ್ಲಿ ವಿವರಣೆಯನ್ನು ನೀಡಿದ್ದಾರೆ.
ಡಾ. ಎಚ್. ಗಿರಿಜಮ್ಮ- ಹುಟ್ಟಿದ್ದು ದಾವಣಗೆರೆ. ಪಿಯುಸಿವರೆಗೆ ಓದಿದ್ದು ಅಲ್ಲಿಯೇ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ. ಅವರ ಮೊದಲ ಕತೆ ಹೂಬಳ್ಳಿಗೆ ಈ ಆಸರೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ...
READ MORE