ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಸಾಹಿತ್ಯ ಕೃತಿ -ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ. ಹಲವಾರು ಪ್ರವಾಸಿ ಕಥನಗಳನ್ನು ರಚಿಸಿರುವ ಆಗುಂಬೆ ನಟರಾಜ್ ಅವರು ಪ್ರವಾಸಿ ಕಥನದಲ್ಲೂ ವಿಭಿನ್ನ ಶೈಲಿಯ ಬರವಣಿಗೆಯಿಂದಾಗಿ ಓದುಗರನ್ನು ತಲುಪುತ್ತಾರೆ. ಈ ಕೃತಿಯಲ್ಲಿ ಇದು ದಿಲ್ಲಿ, ಮಹಾನ್ ಕಲಾವಿದನ ಮನೆ ಇಂದು ಹಾಳು ಮನೆ, ಮೈಸೂರಿನ ಸರ್ವಾಧಿಕಾರಿ, ಕೇರಳದ ಒಂದು ಐತಿಹಾಸಿಕ ಹಳ್ಳಿ, ಸಂತ ಜೇವಿಯರ್ ನ ಚರ್ಚ್, ರಾಮ ಕಾಮತಿ, ಮಿರ್ಜಾ ಗಾಲಿಬ್, ಕಮಲಾ ನೆಹರೂರವರ ಅನಾಥ ಮನೆ, ಪಾನೀಪತ್, ಹಸ್ತಿನಾಪುರ, ತಾನ್ ಸೇನ್, ಕಾಶಿಯ ಜಂಗಮಮಠ ಸೇರಿದಂತೆ ಹಲವು ವಿಭಿನ್ನ ಲೇಖನಗಳಿವೆ.
©2024 Book Brahma Private Limited.