‘ದಂತಾರೋಗ್ಯದ ರಹಸ್ಯ’ ಖಂಡಿಗೆ ಮಹಾಲಿಂಗ ಭಟ್ ಅವರ ಕೃತಿಯಾಗಿದೆ.ಹಲ್ಲು, ಒಸಡು, ದವಡೆಗಳ ಆರೋಗ್ಯವನ್ನು ಕಡೆಗಣಿಸಿದರೆ ಹಲವಾರು ಕಾಯಿಲೆಗಳನ್ನು ನಾವಾಗಿ ಆಹ್ವಾನಿಸಿದಂತೆಯೇ ಸರಿ. ಆಹಾರ ಸೇವಿಸಿದಾಗ ಬಾಯಿಯ ಸ್ವಚ್ಛತೆ ಸರಿಯಿಲ್ಲವಾದರೆ ಹಲವು ರೋಗಾಣುಗಳು ಆಹಾರದೊಂದಿಗೆ ದೇಹಕ್ಕೆ ಸೇರುವ ಸಾಧ್ಯತೆಯಿದೆ. ಅಲ್ಲದೆ ಆರೋಗ್ಯಪೂರ್ಣ ದಂತಪಂಕ್ತಿ ಮುಖಕ್ಕೆ ಸೌಂದರ್ಯವನ್ನೂ ನೀಡುತ್ತದೆ. ಹುಳುಕು ಹಲ್ಲುಗಳಿದ್ದು ಅದರಿಂದ ಬಾಯಿ ವಾಸನೆ ಇದ್ದಲ್ಲಿ ನಾವು ಎಲ್ಲರೊಂದಿಗೆ ಬೆರೆತು ಮಾತನಾಡಲೂ ಸಂಕೋಚ ಪಡುತ್ತೇವಲ್ಲವೆ? ಇಂದು ವೈದ್ಯಕೀಯ ಕ್ಷೇತ್ರದಲ್ಲಿ ದಂತಾರೋಗ್ಯದ ಬಗ್ಗೆ ಹಲವು ಸಂಶೋಧನೆಗಳಿಂದಾಗಿ ದಂತಕ್ಷಯದ ಬಗ್ಗೆ ಭಯ ಪಡಬೇಕಾಗಿಲ್ಲ. ಚಿಕಿತ್ಸೆಗೆ ಹೊಸ ಹೊಸ ವಿಧಾನಗಳಿವೆ. ಹಲ್ಲುಗಳ ಆರೋಗ್ಯದ ಬಗ್ಗೆ, ಕೃತಕ ಹಲ್ಲುಗಳ ಜೋಡಣೆ, ಸ್ಥಿರವಾಗಿ ಕೂರಿಸುವ ಹೊಸ ವಿಧಾನ ಫಿಕ್ಸ್ ಬ್ರಿಜ್, ಇಂಪ್ಲಾಂಟ್ ಆಧಾರಿತ ಹಲ್ಲು ಜೋಡಣೆ ಮುಂತಾಗಿ ನಿರಪಾಯಕಾರಿ ಚಿಕಿತ್ಸೆಯ ವಿವರಗಳನ್ನು ದಂತವೈದ್ಯ ಡಾ॥ ಖಂಡಿಗೆ ಮಹಾಲಿಂಗ ಭಟ್ ಈ ಕೃತಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.