ಖಂಡಿಗೆ ಮಹಾಲಿಂಗ ಭಟ್ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನುಹುಟ್ಟೂರಾದ ಕಾಸರಗೋಡು ತಾಲೂಕಿನ ನೀರ್ಚಾಲು ಎಂಬ ಚಿಕ್ಕ ಊರಿನ ಮಹಾಜನ ಸಂಸ್ಕೃತ ಕಾಲೇಜು ಹೈ ಸ್ಕೂಲ್ ಎಂಬ ಕನ್ನಡ ಮಾಧ್ಯಮ ಶಾಲೆಯಲ್ಲಿಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಸೇರಿ ಪಿ.ಯು. ಸಿ (1966-67) ಮತ್ತು ಬಿ. ಯಸ್.ಸಿ (1967-1970) ಪೂರೈಸಿದರು. ನಂತರ ಮಣಿಪಾಲ ದಂತವೈದ್ಯಕೀಯ ಕಾಲೇಜಿನಲ್ಲಿತಮ್ಮ ಸ್ನಾತಕ ಪದವಿಯನ್ನು (1970-1975) ಪಡೆದರು. 1977 ರಲ್ಲಿ ತಮ್ಮ ಮಾತೃ ಸಂಸ್ಥೆಯಲ್ಲಿ ಸಹಾಯಕ ಅಧ್ಯಾಪಕನಾಗಿ ಸೇರಿದರು; ಅಲ್ಲದೆ ಸ್ನಾತಕೋತ್ತರ ಪದವಿಯನ್ನೂ(1976-1981) ಗಳಿಸಿದರು. ಹಾಗು ಪ್ರಾಧ್ಯಾಪಕನಾಗಿ ಮುಂದುವರಿದರು. 1977 ರಿಂದ 2017 ರ ತನಕ 40 ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ.