ಡಾ. ವಿ. ಪರಮೇಶ್ವರ ಅವರು ರಚಿಸಿದ ಕೃತಿ-ಬೊಜ್ಜುದೇಹ. ಬೊಜ್ಜು ಆರೋಗ್ಯಕ್ಕೆ ಹಾನಿಕರ. ಬೊಜ್ಜಿನಿಂದಾಗಿ ತೂಕ ಹೆಚ್ಚಾಗುವುದು ಮಾತ್ರವಲ್ಲ; ಮಧುಮೇಹ, ಹೃದಯಾಘಾತ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಪ್ರಪಂಚದಾದ್ಯಂತ ಕಾಣಸಿಗುವ ಅತಿ ಭೀಕರ ರೋಗವಿದು. ಏಕೆಂದರೆ, ಇದರ ಅಡ್ಡ ಪರಿಣಾಮಗಳು ಜಾಸ್ತಿ. ಸುಖಜೀವನದ ಬೆನ್ನು ಹತ್ತಿ ಶರೀರಕ್ಕೆ ಶ್ರಮವಿಲ್ಲದ ಹಗುರ ಕೆಲಸ, ಸಿದ್ಧ ಆಹಾರ ಸೇವನೆ, ಐಷಾರಾಮಿ ಜೀವನಶೈಲಿ ಮುಂತಾದವು ಬೊಜ್ಜು ಶೇಖರವಾಗಲು ಕಾರಣವಾಗುತ್ತಿದೆ. ಹಿತಮಿತವಾದ ಆಹಾರ ಸೇವನೆಯಿಂದ, ಶಿಸ್ತಿನ ಜೀವನಕ್ರಮದಿಂದ ಬೊಜ್ಜನ್ನು ಹೇಗೆ ನಿವಾರಿಸಬಹುದು. ಈ ಕುರಿತು ಹತ್ದೆಂತು ಹಲವು ಸಲಹೆಗಳನ್ದುನು, ಸೂಚನೆಗಳನ್ನು ನೀಡಿರುವ ಉಪಯುಕ್ತ ಕೃತಿ ಇದು.
(ಹೊಸತು, ಜೂನ್ 2012, ಪುಸ್ತಕದ ಪರಿಚಯ)
ಆಹಾರದಲ್ಲಿನ ಕೊಬ್ಬಿನ ಅಂಶ ಕರಗದೆ ಶರೀರದಲ್ಲಿ ಶೇಖರಗೊಂಡು ದೇಹದ ತೂಕ ಹೆಚ್ಚಿ ಗಾತ್ರ ಹೆಚ್ಚಾದಾಗ ಬೊಜ್ಜು ಎನಿಸಿಕೊಳ್ಳುತ್ತದೆ. ಇದನ್ನು ಒಂದು ವ್ಯಾಧಿಯೆಂದು ಪರಿಗಣಿಸಿ ಬೊಜ್ಜನ್ನು ಇಳಿಸಲು ಪ್ರಪಂಚದಾದ್ಯಂತ ವಿವಿಧ ಚಿಕಿತ್ಸೆಗಳ ಮೊರೆಹೋಗಲಾಗಿದೆ. ಪ್ರತಿಯೊಂದು ಕೆಲಸಕ್ಕೂ ಯಂತ್ರಗಳನ್ನವಲಂಬಿಸಿ ಶ್ರಮಜೀವನಕ್ಕೆ ವಿದಾಯ ಹೇಳಿ ಐಶಾರಾಮಿ ಜೀವನ ನಡೆಸುವ ಶ್ರೀಮಂತ ವರ್ಗದ ಜನರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಮಿತಿಮೀರಿದ ಆಹಾರ ಸೇವನೆಯೂ ಇದಕ್ಕೆ ಕಾರಣ. ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹ ಮುಂತಾದವುಗಳಿಗೆ ಬೊಜ್ಜುದೇಹ ಕಾರಣವಾಗುತ್ತದೆ. ಬೊಜ್ಜನ್ನು ನಿವಾರಿಸಲು ಯಾವ ಕ್ರಮ ಕೈಗೊಳ್ಳಬೇಕು, ಯಾವ ಆಹಾರ ಸೇವಿಸಬೇಕು ಮುಂತಾದ ಉಪಯುಕ್ತ ಮಾಹಿತಿ ಈ ಪುಸ್ತಕದಲ್ಲಿದೆ. ಆರಾಮ ಜೀವನ ತ್ಯಜಿಸಿ ದೈಹಿಕ ಶ್ರಮದ ಕೆಲಸಗಳನ್ನು ಸಾಧ್ಯವಾದಷ್ಟೂ ಹೆಚ್ಚಿಸಬೇಕಾದ ಅಗತ್ಯವನ್ನು ಒತ್ತಿಹೇಳಲಾಗಿದೆ. ತೂಕವನ್ನು ಇಳಿಸಿ ಬೊಜ್ಜನ್ನು ಕರಗಿಸಲು ತೆಗೆದುಕೊಳ್ಳಬೇಕಾದ ಕ್ರಮವನ್ನು ತಿಳಿಸಲಾಗಿದೆ. 20, 21ನೇ ಶತಮಾನದಲ್ಲಿ ಬೊಜ್ಜುದೇಹದ ವ್ಯಾಧಿಯು ಅಪಾಯಕಾರಿ ಮಟ್ಟ ತಲುಪಿ ಆತಂಕ ಸೃಷ್ಟಿಸಿದ್ದನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿ ಎಲ್ಲ ದೇಶದವರಿಗೂ ಎಚ್ಚರಿಕೆಯನ್ನು ಘೋಷಿಸಿದೆ. ಜೋಕೆ ! ಡೆನ್ಮಾರ್ಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ದೇಶದ ಬೊಜ್ಜುದೇಹದ ನಾಗರಿಕರಿಗೆ ಹೊಸ ತೆರಿಗೆ ವಿಧಿಸಿ ಸರ್ಕಾರದ ಬೊಕ್ಕಸಕ್ಕೂ ಬೊಜ್ಜು ಬರಿಸಿದೆ.
©2024 Book Brahma Private Limited.