ಲೇಖಕ ಡಾ. ವಿ ಪರಮೇಶ್ವರ ಅವರು ಹೃದಯರೋಗ ತಜ್ಞರು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಜನ ಸೇವೆಯಲ್ಲಿದ್ದು, ವೈದ್ಯ ಶಾಸ್ತ್ರ ಕುರಿತು ಅನೇಕ ಲೇಖನ-ಪುಸ್ತಕಗಳನ್ನೂ ಬರೆದಿದ್ದಾರೆ. 1985 ರಲ್ಲಿ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾಗಿ, 1988-89 ರಲ್ಲಿ ಅಸೋಸಿಯೇಷನ್ ಆಫ್ ಫಿನಿಷಿಯನ್ಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ, 1994-98 ರಲ್ಲಿ, ಇಂಡಿಯನ್ ಕಾಲೇಜ್ ಆಫ್ ಫಿನಿಷಿಯನ್ಸ್ ನ ಡೀನ್ ಆಗಿ, ಅಖಿಲ ಭಾರತ ಮಟ್ಟದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿದ್ದಾರೆ.
1985 ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993 ರಲ್ಲಿ ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಮಾಸ್ಟರ್ ಟೀಚರ್ ಪ್ರಶಸ್ತಿ, 2014 ರಲ್ಲಿ ಜೀವರಾಜ್ ಮೇಹ್ತಾ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.