ಆಯುರ್ವೇದ ಚಿಕಿತ್ಸಾ ಮಾರ್ಗದರ್ಶಿ ಆರೋಗ್ಯ ಬರಹಗಳ ಪುಸ್ತಕವನ್ನು ಲೇಖಕ ಎನ್. ಅನಂತರಾಮನ್ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾದ ಆಯುರ್ವೇದ ವೈದ್ಯ ಪದ್ಧತಿಯು ಹಲವು ಶತಮಾನಗಳಿಂದ ಪ್ರಖ್ಯಾತವಾಗಿದೆ. ನುರಿತ ವೈದ್ಯರೇ ರೋಗಿಗಳಿಗೆ ಚಿಕಿತ್ಸೆ ಮಾಡುವುದು ಒಂದು ಮುಖವಾದರೆ, ಪ್ರತಿ ಮನೆಯಲ್ಲಿರುವ ವೃದ್ಧರು ತನ್ನ ಕುಟುಂಬದವರಿಗೆ ಮನೆ ಔಷಧಗಳನ್ನು ನೀಡುವುದು ಕೂಡ ನಡೆದುಬಂದಿದೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ವೈದ್ಯರಲ್ಲಿ ಶಾಸ್ತ್ರೀಯ ಔಷಧಗಳ ಬಳಕೆಯು ಕಡಮೆಯಾಗಿ ಪೇಟೆಂಟ್ ಔಷಧಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿರುವುದು ದುರ್ದೈವದ ಸಂಗತಿ. ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಹಾಗೂ ಆಸಕ್ತ ಜನಸಾಮಾನ್ಯರಿಗೆ ಈ ಪುಸ್ತಕ ಉಪಯೋಗಕ್ಕೆ ಬರುತ್ತದೆ. ಲೇಖಕರು ತಮ್ಮ 30ಕ್ಕೂ ಅಧಿಕ ವರ್ಷಗಳ ವೈದ್ಯಕೀಯ ಅನುಭವದ ಮೂಲಕ ಆಯುರ್ವೇದದ ಶಾಸ್ತ್ರೀಯ ಔಷಧಗಳನ್ನು ಬಳಸುವ ಕ್ರಮಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
©2024 Book Brahma Private Limited.