`ಅಂಜದಿರು ಮನವೇ’ ಕ್ಯಾನ್ಸರ್ ನೊಂದಿಗೆ ದಿಟ್ಟ ಹೋರಾಟ ಕೃತಿಯು ಗಾಯತ್ರಿ ಮೂರ್ತಿ ಅವರ ಆರೋಗ್ಯ ಕುರಿತ ಸಂಕಲನವಾಗಿದೆ. ಕೃತಿಯು ಕುರಿತು ಪಿ.ಎಸ್. ಶಂಕರ್ ಅವರು ಹೀಗೆ ಹೇಳಿದ್ದಾರೆ; ಗಾಯತ್ರಿಯವರು ತಮ್ಮ ರೋಗದ ಬಗ್ಗೆ ಬರೆಯುವುದಲ್ಲದೆ ಕ್ಯಾನ್ಸರ್ ಬಗ್ಗೆ ಕೈಕೊಳ್ಳುವ ಪರೀಕ್ಷೆಗಳ ಬಗ್ಗೆ (ಕೆಲನೋಸ್ಕೋಪಿ, ಪೆಟ್ ಸ್ಕ್ಯಾನ್), ಚಿಕಿತ್ಸೆಯ ಬಗ್ಗೆ (ವಿಕಿರಣಚಿಕಿತ್ಸೆ, ಕೀಮೋಥೆರಪಿ) ವಿವರವಾಗಿ ಅರ್ಥವಾಗುವ ರೀತಿಯಲ್ಲಿ ಬೇರೆ ಬೇರೆ ಭಾಗಗಳಲ್ಲಿ (ಸ್ತನ, ಗರ್ಭಕಂಠ) ಬರುವ ಕ್ಯಾನ್ಸರ್ ಬಗ್ಗೆ ವಿವರಿಸಿದ್ದಾರೆ. ಅದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಅಲ್ಲದೆ ದೇಹದ ಅವುಗಳನ್ನು ಬೆಳವಣಿಗೆಯ ಹಂತದಲ್ಲಿ ಹೇಗೆ ಪತ್ತೆಮಾಡಿ ಚಿಕಿತ್ಸೆಗೊಳಗಾಗ ಬೇಕೆಂಬುದರ ಬಗ್ಗೆ ಅನೇಕ ಉದಾಹರಣೆಗಳ ಸಮೇತ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರೋಗದ ಪ್ರಾರಂಭಿಕ ಲಕ್ಷಣಗಳನ್ನು ಅಲಕ್ಷಿಸದಿರುವಂತೆ ಅನುಪಾನ ನೀಡಿದ್ದಾರೆ. ಗಾಯತ್ರಿಯವರ ಹೋರಾಟದಲ್ಲಿ ಅವರ ಕುಟುಂಬದ ಎಲ್ಲ ಸದಸ್ಯರು ಅವರ ಬೆನ್ನಿಗಿದ್ದು ಅವರ ಮನೋಬಲವನ್ನು, ಸ್ಥೆರ್ಯವನ್ನು ಹೆಚ್ಚಿಸಿದ್ದಾರೆ. ಗಾಯತ್ರಿಯವರ ಆರೋಗ್ಯವನ್ನು ಪುನಸ್ಥಾಯಿಗೊಳಿಸುವಲ್ಲಿ ವೈದ್ಯರು, ದಾದಿಯರು, ತಾಂತ್ರಿಕ ಕೆಲಸಗಾರರು ಧರ್ಮ, ಪ್ರದೇಶ ಮತ್ತು ಭಾಷೆಯ ಭೇದವಿಲ್ಲದೆ, ಮನುಕುಲವೆಲ್ಲ ಒಂದೇ ಎಂಬ ರೀತಿಯಲ್ಲಿ ಕಾರ್ಯಮಾಡಿದ್ದಾರೆ. ಅವರೆಲ್ಲರ ಸಹಾಯವನ್ನು ಗಾಯತ್ರಿಯವರು ಸ್ಮರಿಸಿದ್ದಾರೆ. ಈ 'ಟೀಂವರ್ಕ್' ನಲ್ಲಿ ಎಲ್ಲರೂ ಭಾಗಿಯಾಗಿರುವುದು ಸಂತೋಷಕರ, ಅವರು ಗಾಯತ್ರಿಯವರ ಬರವಣಿಗೆ ತುಂಬ ಸರಳ, ಯಾವ ವಿಷಯದ ಬಗೆಗೂ ಅಲಕ್ಷ್ಯ ತೋರದೆ ಎಲ್ಲ ವಿವರಗಳನ್ನು ಸಮಯೋಜಿತವಾಗಿ, ಅರ್ಥವಾಗುವ ರೀತಿಯಲ್ಲಿ ಬರೆದು ಓದುಗರ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್ ಬಗ್ಗೆ ವಿದ್ಯಾವಂತರಲ್ಲಿ ತಿಳಿವಳಿಕೆ ಹೆಚ್ಚು ಬೇಕಿದ್ದು, ಈ ಪುಸ್ತಕದ ಓದಿನಿಂದ ತಮ್ಮ ಪ್ರಶ್ನೆಗಳಿಗೆ ಪರಿಹಾರ ದೊರಕಿಸಿಕೊಳ್ಳುತ್ತಾರೆ. ಇಂತಹ ಅತ್ಯುತ್ತಮ ಕೃತಿಯನ್ನು ತಮ್ಮ ಅನಾರೋಗ್ಯದ ಗಾಯತ್ರಿಯವರು ಪಾತ್ರರಾಗಿದ್ದಾರೆ.
©2024 Book Brahma Private Limited.