ಕಾದಂಬರಿಗಾರ್ತಿ ಗಾಯತ್ರಿ ಮೂರ್ತಿ ಅವರು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1948 ಏಪ್ರಿಲ್ 04 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೆ. ರಾಮಸ್ವಾಮಿ, ತಾಯಿ ಇಂದುಮತಿ. ದೋಣಿ ಸಾಗಲಿ ತೀರಕೆ, ಅಂಜದಿರು ಮನವೇ, ಹಂಬಲ (ಕಾದಂಬರಿ), ಬಿಂದು, ಸಿಂಧು ಮತ್ತು ಬೂಸ್ಸಿ, ಕಾಡಿನಲ್ಲೊಂದು ಕ್ಯಾಂಪು (ಮಕ್ಕಳ ಕಾದಂಬರಿ), ನಕ್ಷತ್ರಗಳು (ಕಾವ್ಯ), ಕೋಸಂಬರಿ (ಹಾಸ್ಯ ಸಾಹಿತ್ಯ), ಕೋಸಂಬರಿ ಹಾಸ್ಯಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಸಂದಿದೆ.