ಎಚ್.ಎಸ್. ಅನುಪಮಾ ಅವರು ಬರೆದ ಪ್ರವಾಸ ಕಥನ ಅಂಡಮಾನ್ ಕಂಡ ಹಾಗೆ. ಅಂಡಮಾನ್ ಪ್ರವಾಸದ ಕುರಿತು ಬರೆದಯುತ್ತಲೇ ಅಲ್ಲಿನ ಜನರ ಸಾಮಾಜಿಕ ಜೀವನದ ಕುರಿತು ವಿವರಿಸಿರುವ ಕೃತಿ ಇದಾಗಿದೆ.
(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)
ಮೂರ್ನಾಲ್ಕು ಶತಮಾನಗಳ ಹಿಂದೆ ನಾಗರಿಕ ಮಾನವ ಕಾಲಿರಿಸಲು ಹೆದರುತ್ತಿದ್ದ. ಈಗ ಭಾರತದ ಅವಿಭಾಜ್ಯ ಅಂಗವಾಗಿರುವ, ಕೇಂದ್ರಾಡಳಿತಕ್ಕೆ ಒಳಪಟ್ಟ ಪ್ರದೇಶವಾಗಿ ಸಾವಿರಾರು ಮೈಲು ದೂರದಲ್ಲಿ, ದಕ್ಷಿಣ ಸಮುದ್ರದಿಂದ ಆವೃತವಾಗಿರುವ ದ್ವೀಪಗಳ ಸಮೂಹವೇ - ಅಂಡಮಾನ್ ನಿಕೋಬಾರ್, ಅಂಡಮಾನ್, ಅಂದರೆ ಮನಸ್ಸಿಗೆ ಬರುವುದು ಕೈದಿಗಳಿಗೆ ಗುಷ್ಠ ಶಿಕ್ಷೆ ಕೊಡಲೆಂದೇ, ಬ್ರಿಟಿಷರಿಂದ ನಿರ್ಮಿಸಲಟ್ಟ ಸೆಲ್ಯೂಲಾರ್ ಜೈಲ ಮತ್ತು ಬಿಲ್ಲು ಬಾಣ ಬಳಸುವ, ಮೈ ಕೈಗೆ ಬಳೆದ ಜೇಡಿ ಮಣ್ಣೆ ಉಡುಪಾದ ನಗ್ನ ಕಾಡು ಮನುಷ್ಯರು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ಈ ದ್ವೀಪ ಸಮೂಹಗಳು, ಪಾಕಿಸ್ತಾನಕ್ಕೆ ಸೇರುವುದು ತಪ್ಪಿ ಭಾರತದ್ದು ಆಗಿಯೇ ಉಳಿದವು, ಈಗ ಲಕ್ಷಾಂತರ ವಲಸಿಗರ ನೆಚ್ಚಿನ ವಸಾಹತುವಾಗಿದೆ. ಪದೇ ಪದೇ ಸುನಾಮಿ ೬ ತಿಂಗಳ ನಿರಂತರ ಮಳೆ, ಭೂ ಮುಳುಗಡೆಯಂಥ ಪಕೃತಿ ವಿಕೋಪ ಗಳಿಂದ ಬಳಲಿ, ಕನಿಷ್ಠ ಸವಲತ್ತುಗಳು ಇಲ್ಲದೆ, ಬನ್ನ ಭಾಷೆ, ಜಾತಿ, ವೃತ್ತಿ, ಧರ್ಮ, ಸಂಸ್ಕೃತಿಗಳು ಶ್ರಮಿಕರಿಂದ ತುಂಬಿದೆ. ಇಲ್ಲಿಗೆ ಪ್ರವಾಸಕ್ಕಾಗಿಯೋ ಅಥವಾ ವಲಾ ಗಾಗಿಯೋ ಹೋಗಾದ ಗಟ್ಟಿ ಮನಸ್ಸಿನ ಸಾಹಸಿಗರಿಗೆ ಅವಶ್ಯ ಮಾಹಿತಿಯನ್ನು, ಸಾಮಾನ್ಯ ಓದುಗರಿಗೆ ಸಾಹಿತ್ಯದ ಔತಣವನ್ನೂ ಈ ಕೃತಿ ಒದಗಿಸುತ್ತದೆ. ಅರಣ್ಯವಾಗ ಪುನರ್ವಸತಿಯ ಸಮಸ್ಯೆಯನ್ನು ವಿಮರ್ಶಿಸಿ, ಅದರ ಅಧ್ಯಯನಕ್ಕೆ ಸೂಕ್ತವಾದ ದೃಷ್ಟಿಕೋನವನ್ನು ಕೊಟ್ಟಿದ್ದಾರೆ.
©2024 Book Brahma Private Limited.