“ಅಮೆರಿಕದಲ್ಲಿ ಬಸವನಗುಡಿ’’ ಕೃತಿಯು ಕೆ. ಸತ್ಯನಾರಾಯಣ ಅವರ ಪ್ರವಾಸಕಥನವಾಗಿದೆ. ಅಮೆರಿಕದ ಕನ್ನಡಿಯಲ್ಲಿ ಭಾರತದ ಮುಖವನ್ನು ತೋರಿಸುವ ಕೃತಿ ಇದಾಗಿದ್ದು, ವಲಸೆ, ಪ್ರತಿಭಾ ಪಲಾಯನ, ಉನ್ನತ ಶಿಕ್ಷಣ ಎಂದು ನಮ್ಮ ಅನುಕೂಲಕ್ಕೆ ಯಾವ ಮಾರ್ಗದ ಹೆಸರಿನಿಂದ ಕರೆದರೂ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ವಲಸಿಗರಾಗಿ ಅಮೆರಿಕ ಪ್ರವೇಶಿಸಿ ಅಲ್ಲಿಯೇ ನೆಲೆಸಿದ್ದಾರೆ ಎನ್ನುವುದು ವಾಸ್ತವ. ಅವರ ಬದುಕು ಅಲ್ಲಿ ಹೇಗಿರುತ್ತದೆ, ಅಮೆರಿಕ ಅವರನ್ನು ಮತ್ತು ಅವರು ಅಮೆರಿಕವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಸೂಕ್ಷ್ಮಗಳನ್ನು ಆ ಬಗೆಯ ಸಂಸಾರದೊಳಗಿದ್ದು ಬರೆಯುವುದು ಅಪರೂಪದ ಸಾಹಿತ್ಯವಾಗುತ್ತದೆ. ಇಂದಿನ ಇಂಟರ್ ನೆಟ್ ಯುಗದಲ್ಲಿ ಅಮೆರಿಕವು ಬಸವನಗುಡಿಯಷ್ಟೇ ಹತ್ತಿರವಾಗುವ, ಅಥವಾ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಹತ್ತಿರ ದೂರ ಎನ್ನುವ ಮಾತುಗಳೇ ಅರ್ಥ ಕಳೆದುಕೊಳ್ಳುವ ಸ್ಥಿತಿಗತಿಗಳನ್ನು ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.