ಆಧುನಿಕ ಜಗತ್ತಿನಲ್ಲಿ ಮಕ್ಕಳ ಲಾಲನೆ ಪೋಷಣೆಯು ದೊಡ್ಡಸವಾಲು, ಸಂಕಷ್ಟ ಅನ್ನುವಂತಾಗಿದೆ.ಸತ್ವವಿಲ್ಲದ ಆಹಾರ, ವಿಷಯಮಯವಾಗುತ್ತಿರುವ ಪರಿಸರದಿಂದ ಇಂದಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ.ಮಿನಿ ಮೆಡಿಕಲ್ ಸ್ಟೋರ್ ಮನೆಯಲ್ಲೇ ಸೃಷ್ಟಿಯಾಗಿದೆ. ವಾರದಲ್ಲಿ ಮೂರು ದಿನ ವೈದ್ಯರ ಮುಖನೋಡುವಂಥ ಸಂದರ್ಭಗಳನ್ನು ಬಹುತೇಕ ಪೋಷಕರು ಎದುರಿಸುತ್ತಿದ್ದಾರೆ. ಮಕ್ಕಳ ಆಯುರ್ವೇದದ ದೃಷ್ಟಿಯಲ್ಲಿ ಆರೋಗ್ಯ ರಕ್ಷಣೆಗೆ ಅಲೋಪಥಿ ಬಿಟ್ಟು ಪರ್ಯಾಯಗಳತ್ತ ನೋಡುವ ಮಂದಿಗೆ ಡಾ.ಎನ್.ಅನಂತರಾಮನ್ ಅವರ “ಆಯುರ್ವೇದದ ದೃಷ್ಟಿಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆ' ಪುಸ್ತಕ ಆಶಾಕಿರಣವಾಗಿದೆ.ಮಕ್ಕಳ ಬೌದ್ಧಿಕ ವಿಕಾಸ, ಕಣ್ಣು ಹಲ್ಲುಗಳ ಆರೈಕೆ ಮತ್ತು ಚರ್ಮದ ಆರೋಗ್ಯಕ್ಕೆ ಪೂರಕ ಸಲಹೆಗಳು ಇಲ್ಲಿವೆ. ಆಯುರ್ವೇದ ವೈದ್ಯಶಾಸ್ತ್ರದ 8 ವಿಭಾಗಗಳಲ್ಲಿ ಬಾಲ ಚಿಕಿತ್ಸೆಯೂ ಒಂದು. ಪ್ರಾಚೀನರ ಜ್ಞಾನವನ್ನು ಆಧುನಿಕ ಪ್ರಪಂಚದಲ್ಲಿ ಬಳಸಿಕೊಳ್ಳುವ ರೀತಿಯ ಬಗ್ಗೆ ಡಾ. ಅನಂತರಾಮನ್ ವಿವರಿಸಿದ್ದಾರೆ.
©2024 Book Brahma Private Limited.