ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರು ಆಸ್ಪತ್ರೆಗಳ ಆನಾರೋಗ್ಯ ಕುರಿತೇ ಬರೆದ ಕೃತಿ-ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು. ವೈದ್ಯರು ರಜೆ ಮೇಲೆ ತೆರಳುವ ಆತುರದಲ್ಲಿದ್ದು, ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಡಿ, ಅನಗತ್ಯ ರಕ್ತಪೂರಣಕ್ಕೆ ಒಪ್ಪಬೇಡಿ, ಒಣ ರೇಜರ್ ಬಳಸಲು ಬಿಡಬೇಡಿ, ಏನೇನು ಕಾಯಿಲೆ ಇರದಿದ್ದರೂ ಆಗಾಗ ಹೆಲ್ತ್ ಚೆಕಪ್ ಮಾಡಿಸಿಕೊಳ್ಳದಿರಿ, ಸಾವಿನಂಚಿನಲ್ಲಿ ಕೃತಕ ಉಸಿರಾಟಕ್ಕೆ ಒಪ್ಪಬೇಡಿ, ಹಳೆ ಸಾಧನಗಳ ಜೊತೆಗೆ ಹೊಸತು ಹಾಕಿಸಿಕೊಳ್ಳಬೇಡಿ, ಡಾಕ್ಟರ್ ತಮ್ಮ ಕೈ ತೊಳೆದಿದ್ದಾರೆಯೇ ನೋಡಿ....ಇಂತಹ ಏಳು ಅಂಶಗಳತ್ತ ಸಾರ್ವಜನಿಕರನ್ನು ಎಚ್ಚರಿಸುವ ಬರಹಗಳು ಈ ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.