ಪ್ರಾಚೀನ ಭಾರತೀಯ ವೈದ್ಯಪದ್ಧತಿಯಲ್ಲಿ ಆಯುರ್ವೇದ ಬಹುಮುಖ್ಯ. ನಮ್ಮ ಪ್ರತಿದಿನದ ಆಹಾರ ಕ್ರಮ, ದಿನಚರಿ, ಋತುಚರ್ಯೆ, ನಡವಳಿಕೆ ಹೇಗಿರಬೇಕೆಂಬುದಕ್ಕೆ ಒತ್ತುಕೊಟ್ಟು, ಆ ಮೂಲಕ ಕಾಯಿಲೆಗಳು ಬಾರದಂತೆ ತಡೆಗಟ್ಟುವ ವಿಧಾನಗಳ ವಿವರ ಕೃತಿಯಲ್ವಾಲಿದೆ.
ಅನಾವಶ್ಯಕವಾಗಿ ಔಷಧಿ ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ. ಮನೆಮದ್ದು, ಪಂಚಕರ್ಮ, ಕಾಯಚಿಕಿತ್ಸೆ, ಮುಂತಾದವುಗಳಿಂದ ಜನಸಾಮಾನ್ಯರ ಆರೋಗ್ಯ ರಕ್ಷಣೆಯನ್ನು ಸಾವಿರಾರು ವರ್ಷಗಳಿಂದ ಹೊಣೆಗಾರಿಕೆಯಿಂದ ನಿರ್ವಹಿಸುತ್ತ ಬಂದಿದೆ ಎಂದು ಆಯುರ್ವೇದ ಬಗೆಯನ್ನು ಲೇಖಕ ಡಾ. ಸತ್ಯನಾರಾಯಣ ಭಟ್ವ ವಿವರಿಸಿದ್ದಾರೆ.
©2024 Book Brahma Private Limited.