ವೈದ್ಯ ಸಹಚರ-ಹೆಸರೇ ಸೂಚಿಸುವಂತೆ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆಯೊಂದಿಗೆ ಗುಣಪಡಿಸುವ ಬಗ್ಗೆ ಅಮೂಲ್ಯ ಸಲಹೆಗಳುಳ್ಳ ಕೃತಿ. ಲೇಖಕರು ಪ್ರೊ. ಟಿ.ಎಲ್. ದೇವರಾಜ. ಕಾಯಿಲೆಗಳಿಗೆ ಯಾವುದು ಸೂಕ್ತ ಚಿಕಿತ್ಸೆ ಎಂಬ ಮಾಹಿತಿ ಒಳಗೊಂಡ ಈ ಕೃತಿಯು ವಿಶೇಷವಾಗಿ ವೈದ್ಯರಿಗೆ ಉತ್ತಮ ಕೈಪಿಡಿಯಾಗಿದೆ.
ಡಾ. ಟಿ.ಎಲ್. ದೇವರಾಜ್ ಅವರು ಆಯುರ್ವೇದ ವೈದ್ಯರು. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಥೆರಣ್ಯ ಗ್ರಾಮದವರು. 1938ರ ಸೆಪ್ಟೆಂಬರ್ 22 ರಂದು ಜನನ. 1964ರಲ್ಲಿ, ಮೈಸೂರಿನಲ್ಲಿರುವ ಭಾರತೀಯ ಔಷಧ ಶಾಸ್ತ್ರಕ್ಕೆ ಸಂಬಂದಿಸಿದ ಸರ್ಕಾರಿ ಮಹಾವಿದ್ಯಾಲಯದಿಂದ ಪದವಿ ಪಡೆದರು. ಜಿಲ್ಲಾ ಸಹಾಯಕ ಆರೋಗ್ಯಾಧಿಕಾರಿಯಾಗಿ ಸೇವೆಗೆ ಸೇರಿದ 4 ವರ್ಷದ ನಂತರ, ಬನಾರಸ ವಿ.ವಿ.ದಿಂದ (1972) ಎಂ.ಡಿ. ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನಲ್ಲಿಯ ಭಾರತೀಯ ಔಷಧ ಶಾಸ್ತ್ರ ಮಹಾವಿದ್ಯಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅಂತಿಮವಾಗಿ ಅವರು ಆಯುಷ್ ಇಲಾಖೆಯ ಉಪನಿರ್ದೇಶಕರಾಗಿ (1996) ನಿವೃತ್ತಿ ...
READ MORE