ಲೇಖಕ ರಣಜಿತ ಬೀರಣ್ಣ ನಾಯ್ಕ ಕೆಂಚನ್, ಹಿರೇಗುತ್ತಿ ಅವರು ಕರಾವಳಿ ಮುಂಜಾವು ದಿನಪತ್ರಿಕೆಗೆ ವೈದ್ಯ ಲೋಕ ಕುರಿತು ಬರೆದ ಅಂಕಣಗಳ ಸಂಕಲನ 'ವೈದ್ಯ - ದರ್ಪಣ' ಕೃತಿ.
ಈ ಕೃತಿಯಲ್ಲಿ ವೈದ್ಯಲೋಕಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ, ಮಾಹಿತಿಯುಕ್ತ ಲೇಖನಗಳಿವೆ. ಸಮಕಾಲೀನ ಸಂದರ್ಭದಲ್ಲಿ ವೈದ್ಯ ಲೋಕ ಕುರಿತು ವಿವಿಧ ಸಂದರ್ಭಗಳಲ್ಲಿ ನಡೆದ ಚರ್ಚೆ, ಸಂವಾದಗಳ ಕುರಿತಾಗಿ ಅಭಿಪ್ರಾಯಗಳನ್ನು ಬರೆದಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕು ಹಿರೇಗುತ್ತಿಯವರಾದ ಇವರು ವೃತ್ತಿಯಲ್ಲಿ ವೈದ್ಯರು. ಪ್ರಸ್ತುತ ಬೆಳಗಾವಿಯ ಕೆ.ಎಲ್.ಇ.ಎಸ್. ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಕ್ರಿಯೆ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016 ರಿಂದ 2020ರ ವರೆಗೆ ನಿರಂತರವಾಗಿ "ಕರಾವಳಿ ಮುಂಜಾವು" ಪತ್ರಿಕೆಗೆ ಪ್ರತಿವಾರ ವೈದ್ಯಕೀಯ ವಿಚಾರಗಳ ಕುರಿತು ಅಂಕಣಗಳನ್ನು ಬರೆದಿರುವರು. ಅವರ "ವೈದ್ಯ-ವಿಜ್ಞಾನ" ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡಮಿಯ ಶ್ರೇಷ್ಠ ಪುಸ್ತಕ ಪ್ರಶಸ್ತಿ ದೊರೆಕಿದೆ. ರಕ್ತದಾನ, ಹಿಮೋಫಿಲಿಯಾ, ಮಧುಮೇಹ, ಹೃದ್ರೋಗ ಕುರಿತು ಅರಿವು, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತ ವೈದ್ಯಕೀಯ ...
READ MORE