ವ್ಯಾಸರು ತನ್ನ ತಾಯಿಗೆ ಹೇಳಿದರೆಂಬ ಮಾತೊಂದು ಪ್ರಸಿದ್ದವಾಗಿದೆ. 'ಸ್ವಃ ಸ್ವಃ ಪಾಪೀಯ ದಿವಾಸಾಃ ಪೃಥಿವೀ ಗತ ಯೌವನಾ'- ಮಣ್ಣಿನ ಮೌವ್ವನ ಕಳೆಯಿತು ಎಂಬರ್ಥದ ಮಾತದು. ಇದು ಮಣ್ಣಿನ ಬಗೆಗೂ ನಿಜ; ಮನುಷ್ಯನ ಬಗೆಗೂ ಸತ್ಯ. ಭೂಮಿ ಮತ್ತು ಹೆಣ್ಣಿನ ಅನನ್ಯತೆ ಅನ್ನೋನ್ಯವಾಗಿರುವಂಥದು. ಸಮಾನತೆಯಂತೆಯೇ ಸಹಬಾಳ್ವೆಯನ್ನು ಪಾಲನೆಯಂತೆ ಪೋಷಣೆಯನ್ನೂ ಶಕ್ತಿಯಂತೆ ಸಾಮರ್ಥ್ಯವನ್ನು, ತಾಳ್ಮೆಯಂತೆ ಸಹನಶೀಲತೆಯನ್ನು ಭೂಮಿಯಲ್ಲೂ ಕಾಣಬಹುದು ಹೆಣ್ಣಿನಲ್ಲೂ ಕಾಣಬಹುದು. ಹೀಗೆ ನಮ್ಮನ್ನು ನಾವೇ ನೋಡಿಕೊಳ್ಳುವ ಒಂದು ಪ್ರಯತ್ನ ಅವನಿ, ಅನ್ನ, ಅರಿವು ಮತ್ತು ಅರಿವುಗಳ ಕುರಿತ ಪರ್ಯಾಯ ನೆಲೆಗಳ ಹುಡುಕಾಟ ನಮ್ಮ ಕೇಂದ್ರ ಭೂಮಿಕೆ.
ಸೊಪ್ಪುಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಪ್ರಾಚೀನ ಕಾಲದಿಂದ ಮನುಷ್ಯನಿಗೆ ಆಹಾರವಾಗಿರುವ, ಅವಳ ಘನತೆಯನ್ನು ಎತ್ತಿ ಹಿಡಿದಿರುವ, ಕಾಲಾನುಕ್ರಮದಲ್ಲಿ ಜ್ಞಾನದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಲೆ-ಸೊಪ್ಪುಗಳ ಲೋಕ ನಿಜಕ್ಕೂ ಅಚ್ಚರಿ ಮೂಡಿಸುವಂಥದು. 'ಸಕಲ ರೋಗಗಳಿಗೂ ಮದ್ದುಂಟು' ಎಂಬ ತತ್ವದಂತೆ ಸೊಪ್ಪಿನ ಔಷಧೀಯ ಗುಣ ಮನುಷ್ಯರನ್ನು ಮಾತ್ರವಲ್ಲ; ಸಮಾಜದ ಆರೋಗ್ಯವನ್ನು ಕಾಪಿಡಬಲ್ಲದು. ಸೊಪ್ಪಿನ ಕುರಿತು ಇದು ಮೊದಲ ಪುಸ್ತಕವಲ್ಲ; ಆದರೆ ಹೀಗೆ ನೋಡುವ ನಮ್ಮ ಪ್ರಯತ್ನ ಮೊದಲನೆಯದು. ಸೋಪಿನ ದೇಸೀ ನೋಟ; ವೈದ್ಯಕೀಯ ಉಪಯೋಗಗಳು ಮತ್ತು ಸೊಪ್ಪಿನಿಂದ ತಯಾರಿಸಬಹುದಾದ ಕೆಲವು ಪದಾರ್ಥಗಳ ಬಗ್ಗೆ ಇಲ್ಲಿ ವಿವರಣೆ ಇದೆ. ಸೊಪ್ಪುಗಳ ಬ್ರಹ್ಮಾಂಡ ಲೋಕ ಪ್ರವೇಶಿಸಲು ಇದೊಂದು ಬೆಳಕಿಂಡಿ.
©2024 Book Brahma Private Limited.