ಡಾ. ಟಿ.ಎಲ್. ದೇವರಾಜ್ ಅವರ ಕೃತಿ-ಸಂಪೂರ್ಣ ಆರೋಗ್ಯಕ್ಕೆ ಆಯುರ್ವೇದ. ವಿವಿಧ ರೋಗ ಚಿಕಿತ್ಸಾ ಪದ್ಧತಿಗಳನ್ನು ತೌಲನಿಕವಾಗಿ ಅಧ್ಯಯನ ನಡೆಸುವುದರೊಂದಿಗೆ ಅವರು ಆಯುರ್ವೇದದಲ್ಲಿಯ ಚಿಕಿತ್ಸಾ ಪದ್ಧತಿಗಳು ಸೂಕ್ತ ಹಾಗೂ ಪರಿಣಾಮಕಾರಿ ಎಂಬುದನ್ನು ಸಾರ್ವಜನಿಕ ವಲಯದಲ್ಲಿ ಮನವರಿಕೆ ಮಾಡಿಕೊಡುವುದು ಈ ಕೃತಿಯ ಉದ್ದೇಶವಾಗಿದೆ.
ಡಾ. ಟಿ.ಎಲ್. ದೇವರಾಜ್ ಅವರು ಆಯುರ್ವೇದ ವೈದ್ಯರು. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಥೆರಣ್ಯ ಗ್ರಾಮದವರು. 1938ರ ಸೆಪ್ಟೆಂಬರ್ 22 ರಂದು ಜನನ. 1964ರಲ್ಲಿ, ಮೈಸೂರಿನಲ್ಲಿರುವ ಭಾರತೀಯ ಔಷಧ ಶಾಸ್ತ್ರಕ್ಕೆ ಸಂಬಂದಿಸಿದ ಸರ್ಕಾರಿ ಮಹಾವಿದ್ಯಾಲಯದಿಂದ ಪದವಿ ಪಡೆದರು. ಜಿಲ್ಲಾ ಸಹಾಯಕ ಆರೋಗ್ಯಾಧಿಕಾರಿಯಾಗಿ ಸೇವೆಗೆ ಸೇರಿದ 4 ವರ್ಷದ ನಂತರ, ಬನಾರಸ ವಿ.ವಿ.ದಿಂದ (1972) ಎಂ.ಡಿ. ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನಲ್ಲಿಯ ಭಾರತೀಯ ಔಷಧ ಶಾಸ್ತ್ರ ಮಹಾವಿದ್ಯಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅಂತಿಮವಾಗಿ ಅವರು ಆಯುಷ್ ಇಲಾಖೆಯ ಉಪನಿರ್ದೇಶಕರಾಗಿ (1996) ನಿವೃತ್ತಿ ...
READ MORE