ರೋಗ ಬರುವ ತನಕ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಮ್ಮ ದೇಹಕ್ಕೆ ಒಗ್ಗದ ಪದಾರ್ಥ, ಜಂಕ್ ಫುಡ್ ಎಲ್ಲವನ್ನು ತಿನ್ನುತ್ತೇವೆ. ಆಗ ಒಂದು ಅಂಗ ಸರಿಯಾಗಿ ಕೆಲಸ ಮಾಡದೇ ಕೆಟ್ಟಾಗ, ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ನಮ್ಮ ದೇಹ ತೋರುವ ಪ್ರತಿರೋಧವನ್ನು ಗುರುತಿಸದಷ್ಟರ ಮಟ್ಟಿಗೆ ಅಜ್ಞಾನಿಗಳಾಗುತ್ತೇವೆ. ಅಂತಹ ರೋಗ ಲಕ್ಷಣವನ್ನು ಕಂಡು, ನಮ್ಮ ಮನಃಪಟಲದ ಮೇಲೆ ಮೂಡುವ ಕ್ಯಾನ್ಸರ್, ಕ್ಷಯ, ಹೃದಯಾಘಾತದ ಭಯವನ್ನು ಹೋಗಲಾಡಿಸಲು ಈ ಪುಸ್ತಕ ಉಪಯುಕ್ತ.
ನಮ್ಮ ದೇಹದ ಪ್ರತಿಯೊಂದು ಸಾಮಾನ್ಯ ರೋಗ ಲಕ್ಷಣಗಳ ಬಗ್ಗೆ ತಿಳಿವಳಿಕೆ, ಅವುಗಳು ಬರಲು ಕಾರಣ, ಅವು ಯಾವ ರೋಗದ ಲಕ್ಷಣ, ಅವು ಬಂದಾಗ ಏನು ಮಾಡಬೇಕು, ಅವುಗಳ ಪ್ರಾರಂಭ ಯಾವುದು, ಯಾವಾಗ ಹೆಚ್ಚಾಗುತ್ತವೆ, ಯಾವಾಗ ಕಡಿಮೆಯಾಗುತ್ತವೆ ಎಂಬ ಮಾಹಿತಿಯನ್ನು ಉಪಯುಕ್ತವಾಗುವಂತೆ ಲೇಖಕರು ಪುಸ್ತಕವನ್ನು ರಚಿಸಿದ್ದಾರೆ. ಸಾಮಾನ್ಯ ಜ್ವರದಿಂದ ಹಿಡಿದು ಲಕ್ವದಂತಹ ಗಂಭೀರ ರೋಗಲಕ್ಷಣಗಳನ್ನು ವಿವರಿಸಲಾಗಿದೆ.
©2024 Book Brahma Private Limited.