ಪ್ರಸೂತಿ ತಂತ್ರ, ಸ್ತ್ರೀ ರೋಗಗಳು, ಬಾಲ ರೋಗಗಳು ಹಾಗೂ ಕುಟುಂಬ ನಿಯಂತ್ರಣ-ಕೃತಿಯನ್ನು ಡಾ. ಟಿ.ಎಲ್. ದೇವರಾಜ್ ರಚಿಸಿದ್ದಾರೆ. ವೈದ್ಯಕೀಯವಾದ ಈ ಪರಿಕಲ್ಪನೆಗಳ ಗ್ರಹಿಕೆ, ಮುಂಜಾಗ್ರತೆ, ಚಿಕಿತ್ಸಾ ವಿಧಾನಗಳು ಹಾಗೂ ಕುಟುಂಬ ನಿಯಂತ್ರಣದ ಅಗತ್ಯ ಮಾಹಿತಿ ಒಳಗೊಂಡ ಕೃತಿ.
ಡಾ. ಟಿ.ಎಲ್. ದೇವರಾಜ್ ಅವರು ಆಯುರ್ವೇದ ವೈದ್ಯರು. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಥೆರಣ್ಯ ಗ್ರಾಮದವರು. 1938ರ ಸೆಪ್ಟೆಂಬರ್ 22 ರಂದು ಜನನ. 1964ರಲ್ಲಿ, ಮೈಸೂರಿನಲ್ಲಿರುವ ಭಾರತೀಯ ಔಷಧ ಶಾಸ್ತ್ರಕ್ಕೆ ಸಂಬಂದಿಸಿದ ಸರ್ಕಾರಿ ಮಹಾವಿದ್ಯಾಲಯದಿಂದ ಪದವಿ ಪಡೆದರು. ಜಿಲ್ಲಾ ಸಹಾಯಕ ಆರೋಗ್ಯಾಧಿಕಾರಿಯಾಗಿ ಸೇವೆಗೆ ಸೇರಿದ 4 ವರ್ಷದ ನಂತರ, ಬನಾರಸ ವಿ.ವಿ.ದಿಂದ (1972) ಎಂ.ಡಿ. ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನಲ್ಲಿಯ ಭಾರತೀಯ ಔಷಧ ಶಾಸ್ತ್ರ ಮಹಾವಿದ್ಯಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅಂತಿಮವಾಗಿ ಅವರು ಆಯುಷ್ ಇಲಾಖೆಯ ಉಪನಿರ್ದೇಶಕರಾಗಿ (1996) ನಿವೃತ್ತಿ ...
READ MORE