ಪ್ರಸ್ತುತ ಯೋಗ ಎನ್ನುವುದು ಒಂದು ಉದ್ಯಮ ರೂಪವನ್ನು ಪಡೆಯುತ್ತಿದೆ. ಎಲ್ಲರೂ ಯೋಗವನ್ನು ಕಲಿಸಲು ಆತುರರಾಗಿದ್ದಾರೆ. ಯೋಗದ ಬಗ್ಗೆ ಪ್ರಾಥಮಿಕ ಮಾಹಿತಿಗಳಷ್ಟೇ ಉಳ್ಳವರು ಯೋಗ ಶಿಕ್ಷಕರಾಗುತ್ತಿದ್ದಾರೆ. ವ್ಯಾಯಾಮಗಳನ್ನೇ ಯೋಗ ಎಂದು ತಿಳಿದುಕೊಂಡವರೂ ಇದ್ದಾರೆ. ಆಧುನಿಕ ಒತ್ತಡಗಳು ಮನುಷ್ಯರನ್ನು ರೋಗಿಗಳನ್ನಾಗಿಸುವ ಹೊತ್ತಿನಲ್ಲೇ ಯೋಗದ ಹೆಸರಿನಲ್ಲಿ ಮೋಸ ಮಾಡುವವರೂ ಹೆಚ್ಚುತ್ತಿದ್ದಾರೆ. ಈ ನಿಟ್ಟಿನಲ್ಲಿ ಯೋಗದಲ್ಲಿ ಅತೀ ಮುಖ್ಯವಾಗಿರುವ ಪ್ರಾಣಾಯಾಮದ ಬಗ್ಗೆ ಕೃತಿಯಲ್ಲಿ ವಿವರಿಸಲಾಗಿದೆ. ಕೃತಿಯಲ್ಲಿ ಮೂರು ವಿಭಾಗಗಳಿವೆ. ಯೋಗ ಶಾಸ್ತ್ರದಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದಲೂ ಸಹ ಪ್ರಾಣಾಯಾಮಕ್ಕೆ ವಿಶಿಷ್ಟ ಸ್ಥಾನವಿದೆ. ಈ ನಿಟ್ಟಿನಲ್ಲಿ ಈ ಪುಸ್ತಕವು ಪ್ರಾಣಾಯಾಮದ ಪ್ರಾಥಮಿಕ ವಿಧಾನಗಳಷ್ಟೇ ಅಲ್ಲದೆ ಅದರ ಮುಂದುವರಿದ ವಿಧಾನಗಳಿಗೂ ಕೈ ಪಿಡಿಯಾಗಿದೆ. ಇಲ್ಲಿ ಪ್ರಾಣಾಯಾಮದ ಹಿನ್ನೆಲೆಯನ್ನು, ಪ್ರಯೋಜನವನ್ನು ವಿವರಿಸಿರುವುದೇ ಅಲ್ಲದೆ ಅದನ್ನು ಹೇಗೆ ಕಲಿಯಬೇಕು ಎಂಬುದರ ಕುರಿತು ಚಿತ್ರ ಸಹಿತ 24 ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.