ಪ್ರಾಣ ಉಳಿಸಿದ ಪುಣ್ಯಕೋಟಿ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 272

₹ 250.00




Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 99165 95916

Synopsys

ಅಮೆರಿಕದಲ್ಲಿ ಹುಟ್ಟಿ ಬೆಳೆದ ಅಮಿತ್‌ ವೈದ್ಯ ಅವರಿಗೆ 23 ನೇ ವಯಸ್ಸಿನಲ್ಲೇ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು.  ಅದಾಗಲೇ ತಮ್ಮ ತಂದೆ ತಾಯಿಯನ್ನೂ ಅವರು ಕಳೆದುಕೊಂಡಿದ್ದರು. ಅವರ ತಾಯಿ ಮೃತಪಟ್ಟಿದ್ದೂ ಕ್ಯಾನ್ಸರ್‌ನಿಂದಲೇ. ಕ್ಯಾನ್ಸರ್‌ ಇದೆ ಎನ್ನುವುದು ತಿಳಿದ ಮೇಲೆ ಆ ಕಾಯಿಲೆಯನ್ನು ವೈದ್ಯ ಅವರು ಮಣಿಸಿದ ಬಗೆ ಮತ್ತು ಬದುಕಲು ನಡೆಸಿದ ಜೀವನೋತ್ಸಾಹದ  ಕಥೆಯ ಕುರಿತು ಈ ಕೃತಿಯಲ್ಲಿ ವಿವರಗಳನ್ನು ನೀಡಿದ್ಧಾರೆ.

ಹೋಲಿ ಕ್ಯಾನ್ಸರ್‌ ಹೌ ಎ ಕೌ ಸೇವ್ಡ್‌ ಮೈ ಲೈಫ್‌’  ಎಂಬ ಹೆಸರಿನ ಮೂಲಕೃತಿಯನ್ನು ಪತ್ರಕರ್ತ ಬಿ.ಎಸ್‌.ಜಯಪ್ರಕಾಶ ನಾರಾಯಣ ಅವರು ’ಪ್ರಾಣ ಉಳಿಸಿದ ಪುಣ್ಯಕೋಟಿ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Reviews

ಕೈ ಮರದಂಥ ಕೃತಿ

ಕ್ಯಾನ್ಸರ್ ಬಗ್ಗೆ ಅದನ್ನು ಗೆದ್ದವರ ಬಗ್ಗೆ ಈಗಾಗಲೇ ಅನೇಕ ಪುಸ್ತಕಗಳು ಬಂದಿವೆ. ಪತ್ರಕರ್ತ ಜಯಪ್ರಕಾಶ ನಾರಾಯಣ ಅನುವಾದಿಸಿರುವ ಅಮಿತ್ ವೈದ್ಯ ಅವರ Holy cancer, how a cow saved my life ಕೃತಿ, ಪ್ರಾಣ ಉಳಿಸಿದ ಪುಣ್ಯಕೋಟಿ ಎಂಬ ಹೆಸರಲ್ಲಿ ಇದೀಗ ಪ್ರಕಟವಾಗಿದೆ. ಗುಜರಾತ್‌ನವರಾದ ಅಮಿತ್ ವೈದ್ಯ, 23ನೇ ವಯಸ್ಸಿಗೇ ಕಾನರ್‌ ರೋಗಿ ಆದವರು. ಅವರ ತಾಯಿ ಕೂಡ ಕ್ಯಾನ್ಸರ್‌ಗೆ ಬಲಿಯಾದವರು. ತಮಗೆ ಕ್ಯಾನ್ಸರ್‌ ಇದೆ ಎಂದು ಗೊತ್ತಾದ ನಂತರ, ಅದಕ್ಕೆ ಸೆಡ್ಡು ಹೊಡೆಯಲೇಬೇಕು ಎಂದು ನಿರ್ಧರಿಸಿ, ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡ ವೈದ್ಯರ ವಿವರಣೆ ಈ ಪುಸ್ತಕದ ಪುಟಗಳಲ್ಲಿ ತುಂಬಿಕೊಂಡಿದೆ. ಈ ಪುಸ್ತಕದಲ್ಲಿ ಕೇವಲ ಕಾಯಿಲೆಯ ವಿವರಣೆಗಳನ್ನೇ ಅಲ್ಲ ಬದಲಿಗೆ ಸಮಾಜದ ಕ್ರೌರ್ಯ, ಅಮಾನವೀಯತೆ, ಕಷ್ಟ ಬಂದಾಗ ಜೊತೆಯಾಗುವ ಒಂಟಿತನ, ಕಾಯಿಲೆಯನ್ನು ಎದುರಿಸಲು ಬೇಕಾಗುವ ಛಲ, ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು, ಅನುಸರಿಸಬೇಕಾದ ದಿನಚರಿ, ಇರಬೇಕಾದ ಪಥ್ಯ, ನಾವು ತಾಳಬೇಕಾದ ನಂಬಿಕೆ, ಬೆಳೆಸಿಕೊಳ್ಳಬೇಕಾದ ಜೀವನೋತ್ಸಾಹ, ಬದುಕುಳಿಯಬೇಕೆಂಬ ಛಲ, ಅಂತರಂಗದಲ್ಲಿ ಮೊಳೆಯಬೇಕಾದ ಆಶಾವಾದ, ಎಲ್ಲದರ ವಿವರವೂ ಇದೆ. ಕ್ಯಾನ್ಸರ್‌ ಬಂದಿದೆ ಎಂದು ಗೊತ್ತಾದ ನಂತರದಲ್ಲಿ ಧೃತಿಗೆಡದೆ, ಬದುಕನ್ನು ಎದುರಿಸಬೇಕಾದ ಬಗೆ ಯಾವುದೆನ್ನುವ ಕುರಿತು ಸಷ್ಟ ಸಂದೇಶಗಳಿವೆ. ಕ್ಯಾನ್ಸರ್ ವಿರುದ್ದ ಹೋರಾಡಬೇಕು ಎನ್ನುವವರಿಗೆ ಒಂದು ಹೊಸದಾರಿ ತೋರಿಸುವ - ಕೈಮರದಂಥ ಕೃತಿ ಇದೆಂದು ಹೇಳಲು ಅಡ್ಡಿ ಇಲ್ಲ ಪ್ರಾಣ ಉಳಿಸಿದ ಪುಣ್ಯಕೋಟಿ,

-ಉದಯವಾಣಿ (Sat, 30 March 2019, ಹೊಸ ಪ್ರಕಟಣೆಗಳ ಅವಲೋಕನ ಅಂಕಣದಲ್ಲಿ)

Related Books