ಅಗತ್ಯದ ಸಮಯದಲ್ಲಿ ದೊರಕುವ ಅತ್ಯಮೂಲ್ಯ ಚಿಕಿತ್ಸೆಯನ್ನು ಪ್ರಥಮ ಚಿಕಿತ್ಸೆ ಎಂದು ಕರೆಯಲಾಗಿದೆ. ಪ್ರಥಮ ಚಿಕಿತ್ಸೆ, ತುಂಬಾ ಮಹತ್ವದ ಚಿಕಿತ್ಸೆ, ಏಕೆಂದರೆ ಈ ಪ್ರಥಮ ಚಿಕಿತ್ಸೆಯಿಂದಾಲೇ ಪ್ರಾಣಗಳು ಉಳಿದ ಪ್ರಸಂಗಗಳು ಅದೆಷ್ಟೋ. ಸಮಯಕ್ಕೆ ತಕ್ಕ ಚಿಕಿತ್ಸೆ ತುಂಬಾ ಮುಖ್ಯ. ಸ್ವಲ್ಪ ತಡವಾದರೂ ಪ್ರಾಣಹಾನಿಯಾಗಬಹುದು. ನರ್ಸಿಂಗ್ ಹೋಂಗಳಲ್ಲಿ ಲಕ್ಷಗಟ್ಟಲೆ ಹಣ ಕೊಟ್ಟು ಪಡೆಯುವ ಚಿಕಿತ್ಸೆಗಿಂತ ತತ್‌ಕ್ಷಣದಲ್ಲಿ ದೊರೆಯುವ ಪ್ರಥಮ ಚಿಕಿತ್ಸೆಯೇ ಜೀವ ಉಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇಂತಹ ಪ್ರಥಮ ಚಿಕಿತ್ಸೆಯ ಪರಿಜ್ಞಾನವನ್ನು ಯಾರು ಬೇಕಾದರೂ ದಕ್ಕಿಸಿಕೊಳ್ಳಬಹುದು. ಇದರಲ್ಲಿ ಪ್ರಾವಿಣ್ಯತೆಯನ್ನೂ ಸಾಧಿಸಿಕೊಳ್ಳಬಹುದು. ಹಲವಾರು ಪ್ರಾಥಮಿಕ ಸಂಗತಿಗಳ ಕುರಿತು, ಪ್ರಥಮ ಚಿಕಿತ್ಸೆಯ ಕುರಿತು ಡಾ|| ಬಿ.ಜಿ. ಚಂದ್ರಶೇಖರ್‌ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.