ಔಷಧಗಳು ನಡೆದು ಬಂದ ದಾರಿ

Author : ನಾ. ಸೋಮೇಶ್ವರ

Pages 120

₹ 100.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-02
Phone: 08022107704

Synopsys

ಜಗತ್ತಿನ ವಿವಿಧ ಭಾಗಗಳಲ್ಲಿ ಮಾನವನ ವಿಕಾಸದೊಂದಿಗೆ ಕಾಯಿಲೆಗಳು ಕಂಡುಬಂದಂತೆ,  ಔಷಧಗಳು ಸಾಗಿಬಂದ ಬಗೆ ಕುತೂಹಲವಾದದು.

ರೋಗಚರಿತ್ರೆ ದಾಖಲಿಸುವ ಪ್ರಯತ್ನ ಆರಂಭವಾದ ಬಗೆ, ಸಾಗಿ ಬಂದ ದಾರಿ ಮತ್ತು ಸಂಶೋಧನೆಯ ಬಗ್ಗೆ ಕೃತಿಯಲ್ಲಿ ವಿವರಿಸಲಾಗಿದೆ. ಔಷಧಗಳ ಕುರಿತ ಅತ್ಯಂತ ಸ್ವಾರಸ್ಯಕರ ಕಥೆಗಳನ್ನು ಮತ್ತು ವಸ್ತುನಿಷ್ಠತೆಯಿಂದ ಕೂಡಿದ ಅಧ್ಯಯನವನ್ನು ಲೇಖಕ ಡಾ. ನಾ. ಸೋಮೇಶ್ವರ ಅವರು ಇಲ್ಲಿ ದಾಖಲಿಸಿದ್ದಾರೆ. 

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books