ಮಗು ಬೆಳೆಯುವ ಸಮಯ ತುಂಬಾ ಪ್ರಾಶಸ್ತ್ಯ ಮತ್ತು ಸೂಕ್ಷ್ಮ. ಅದರ ಪಾಲನೆ - ಪೋಷಣೆಯ ಜವಾಬ್ದಾರಿಯನ್ನು ನಿಭಾಯಿಸಬೇಕಿರುವ ಪೋಷಕರ ಜವಾಬ್ದಾರಿಯನ್ನು ಈ ಪುಸ್ತಕ ತಿಳಿಸುತ್ತದೆ.
ಮಕ್ಕಳ ಬೆಳವಣಿಗೆ ಎಂದರೆ ಕೇವಲ ದೇಹ ಬೆಳೆಯುವುದಲ್ಲ; ಮನಸ್ಸು ಬೆಳೆಯಬೇಕು, ಬುದ್ಧಿ ವಿಕಾಸವಾಗಬೇಕು. ಇದಕ್ಕೆ ಪುಷ್ಟಿಕರವಾದ ಆಹಾರ, ಆಟ, ಪಾಠ ಎಷ್ಟು ಮುಖ್ಯವೋ, ನಿಮ್ಮ ಮಮತೆ, ಮಾರ್ಗದರ್ಶನ, ಆಸರೆ ಪ್ರೋತ್ಸಾಹಗಳೂ ಅಷ್ಟೇ ಮುಖ್ಯ ಎನ್ನುತ್ತಾರೆ ಲೇಖಕರು. ಮತ್ತು ಅದಕ್ಕೆ ಸಕಾರಣಗಳನ್ನು ನೀಡುತ್ತಾರೆ.
ಬೆಳೆಯುವ ಮಗು ಅನಾರೋಗ್ಯ ಪೀಡಿತವಾಗುವುದು ಸಹಜ. ಅದು ದೇಹಕ್ಕೆ ಬರಬಹುದು, ಮನಸ್ಸಿಗೆ ಬರಬಹುದು. ಅಂತಹ ಅನಾರೋಗ್ಯವನ್ನು ಪ್ರಾರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಪರಿಹಾರವನ್ನು ಇಲ್ಲಿ ತಿಳಿಸಿಕೊಡಲಾಗಿದೆ. ತಂದೆ ತಾಯಿಗಳು, ಮನೆಯ ಇತರರು, ಉಪಾಧ್ಯಾಯರ ನಡತೆಗಳು ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮ ಮತ್ತು ಅದನ್ನು ನಿಭಾಯಿಸುವ ಬಗೆಯನ್ನು ಸೂಕ್ತವಾಗಿ ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಕೃತಿ ಈವರೆಗೂ 15 ಮುದ್ರಣ ಕಂಡಿದೆ.
©2024 Book Brahma Private Limited.