ನೇತ್ರದಾನ ಮಾಡುವುದರ ಮೂಲಕ ನಾವು ಹುಟ್ಟಿನಿಂದಲೇ ಜಗತ್ತೆಂದರೆ ಏನೆಂದು ಗೋಚರಿಸದ ಜನರಿಗೆ ನೇತ್ರದಾನದ ಮೂಲಕ ಜಗತ್ತನ್ನು ತೋರಿಸುವ ಮಹಾ ಪ್ರಯತ್ನ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ದಾರಿಗಳಿವೆ. ಇವುಗಳಲ್ಲಿ ಈ ನೇತ್ರದಾನವ ಒಂದು ಪ್ರಮುಖ ದಾರಿಯಾಗಿದೆ. ಹುಟ್ಟಿನಿಂದಲೋ ಅಥವಾ ಯಾವುದೋ ಅಪಘಾತದಿಂದಲೋ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ತಮ್ಮ ಅಮೂಲ್ಯವಾದ ನೇತ್ರವನ್ನು ದಾನ ಮಾಡುವ ಮೂಲಕ ಮಾಡುವ ಇನ್ನೊಬ್ಬರಿಗೆ ಕಣ್ಣಿನ ದೃಷ್ಟಿಯ ಭಾಗ್ಯವನ್ನು ಒದಗಿಸಬಹದು. ಅಂಗದಾನದ ಮಹತ್ವವನ್ನು ಅರಿತಾಗ ಮಾತ್ರ ಮನುಷ್ಯ ತನ್ನ ಸಾವನ್ನೂ ಸಾರ್ಥಕಗೊಳಿಸಿಕೊಂಡು ತೃಪ್ತಿತಸ್ಥನಾಗುತ್ತಾನೆ. ಈ ದಾನದ ಮೂಲಕ ಮನುಷ್ಯ ಸಾವಿನ ನಂತರವೂ ಇನ್ನೊಬ್ಬರ ದೇಹದಲ್ಲಿ ಬುದುಕುಳಿಯುತ್ತಾನೆ,ಈ ನಿಟ್ಟಿನಲ್ಲಿ ನೇತ್ರದಾನದ ಮೂಲಕ ಅಂಧತ್ವ ನಿವಾರಣೆಯ ಪಣ ತೊಟ್ಟಂತೆ ಕೃತಿಯುದ್ದಕ್ಕೂ ನೇತ್ರದಾನದ ಅಗತ್ಯತೆ, ಉಪಯುಕ್ತತೆಗಳನ್ನು ರವಿಪ್ರಕಾಶ್ ಅವರು ಜನರಿಗೆ ಮನವರಿಕೆ ಮಾಡಿಕೊಡುತ್ತಾರೆ.
©2024 Book Brahma Private Limited.