ಆಧುನಿಕ ಜೀವನಕ್ರಮಕ್ಕೆ ಮಾರುಹೋದ ಕೆಲವರು ದಿನನಿತ್ಯ ಸೇವಿಸುವ ಆಹಾರ ಪದ್ಧತಿ, ಆಚರಣೆಗೆ ಬಂದನಂತರವಂತೂ ಮೂತ್ರಪಿಂಡಗಳ ಆಗುವ ತೊಂದರೆ ಹೆಚ್ಚಾಗತೊಡಗಿದೆ. ಪ್ರತಿಕ್ಷಣ, ಪ್ರತಿದಿನ ಅವಿರತವಾಗಿ ದುಡಿದು ನಮ್ಮ ರಕ್ತವನ್ನು ಶೋಧಿಸಿ ಜೋಡಿ ಅಂಗಯಂತ್ರಗಳಾದ ಮೂತ್ರಕೋಶಗಳು ಅಪಾಯಕಾರಿ ಕಲ್ಮಶಗಳನ್ನು ದೇಹದಿಂದ ಹೊರಹಾಕಿ ನಮ್ಮನ್ನು ಆಹ್ಲಾದವಾಗಿಡುತ್ತವೆ. ಆದರೆ ಆ ಕ್ರಿಯೆಯಲ್ಲಿ ಅವು ಹಲವಾರು ಸವಾಲುಗಳಿಗೆ ತುತ್ತಾಗುತ್ತವೆ. ಚಿತ್ರವಿಚಿತ್ರ ರೋಗಗಳು ಬಂದಷ್ಟೇ ಸಲೀಸಾಗಿ ನವನವೀನ ಚಿಕಿತ್ಸೆಗಳೂ ಅವತರಿಸಿದೆ. ಅಷ್ಟಾದರು ಈ ಕಿಡ್ನಿಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳು , ಕೆಟ್ಟ ನಂಬಿಕೆಗಳು ಇನ್ನು ಕಡಿಮೆಯಾಗಲಿಲ್ಲ. ಕಿಡ್ನಿಸ್ಟೋನ್ ಎಂದಾಕ್ಷಣ ನಮಗೆ ಕಿಡ್ನಿಯೊಳಗೆ ಕಲ್ಲು ಸೇರಿಕೊಂಡಿದೆ ಅಂತಲೇ ಪರಿಭಾವಿಸುವಷ್ಟು ಮುಗ್ಧತೆ, ಅಜ್ಞಾನ, ಮಾಹಿತಿಯ ಕೊರತೆ ಇದೆ. ಈ ಜ್ಞಾನದ ಕೊರತೆ, ಅಪನಂಬಿಕೆಯನ್ನು ಮನಗಂಡ ಡಾ|| ಎಸ್.ಎಸ್. ನರಸಣಗಿಯವರ ಈ ಕೃತಿಯಲ್ಲಿ ಈ ಎಲ್ಲಾ ಸಂಗತಿಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದಾರೆ.
©2024 Book Brahma Private Limited.