ಕಾಲ ಬದಲಾಗಿದೆ. ಗಂಡ, ಮನೆ, ಮಕ್ಕಳು, ಸಂಸಾರ, ನೋಡಿಕೊಳ್ಳುತ್ತಿದ್ದ ಹೆಣ್ಣುಮಗಳು ಮನೆಯ ಹೊರಗೆ ಕಾಲಿಟ್ಟು ದುಡಿದು ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದಾಳೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರಿಲ್ಲದೆ ಹೆತ್ತವರು ಕಂಗಾಲಾಗಿದ್ದಾರೆ. ಇಂದಿನ ಕಾಲದ ನವಜಾತ ಶಿಶುವಿನ ಹೆತ್ತವರು, ಪೋಷಕರು, ಶಿಕ್ಷಕರು, ಬೇಬಿ ಸಿಟ್ಟರ್‌ಗಳು ಅವಶ್ಯವಾಗಿ ಓದಬೇಕಾದ ಕೃತಿಯಿದು. ಅಪ್ಪ-ಅಮ್ಮ ಮಗುವಿಗೆ ಸುಮಾರು ಎಂಟು ತಿಂಗಳಾದ ನಂತರ ಅನಿವಾರ್ಯವಾಗಿ ದುಡಿಮೆಗೆ ಹೋಗಲೇಬೇಕಾದ ಸ್ಥಿತಿ ಇಂದಿನದು. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇನ್ನಿತರರದಾಗಿದ್ದು ಆತಂಕದ ಮೂಟೆ ಹೆತ್ತವರ ಬೆನ್ನ ಮೇಲಿರುತ್ತದೆ. ಹೆತ್ತವರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಅನೇಕ ಸಲಹೆ ಸೂಚನೆಗಳನ್ನೊಳಗೊಂಡ ಈ ಕೃತಿ ಇಂದಿನ ಕಾಲಕ್ಕೆ ಅತ್ಯುಪಯುಕ್ತವಾಗಿದೆ. ಶಿಶು ಜನನದಿಂದ ಮಗುವಿನ ಶಾಲಾದಿನಗಳವರೆಗೂ ಲೇಖನಗಳ ವಿಸ್ತಾರ ಹರಡಿದೆ.
©2024 Book Brahma Private Limited.