ಮುಕ್ತವಾಗಿ ಚರ್ಚಿಸಲಾಗದ ಮಹಿಳೆಯರ ಹದಿಹರೆಯದ ಸಮಸ್ಯೆಗಳನ್ನು ವಯಸ್ಸಿನ ಕಾರಣದಿಂದಾಗಿ ಮನಸ್ಸು ಎತ್ತೆಂದರತ್ತ ಹರಿಯುವುದು. ವಯಸ್ಸು ಸಾಲದ ಕಾರಣ ವಿವೇಕರಾಹಿತ್ಯ, ಆ ವಯಸ್ಸಿನಲ್ಲಿ ಅವರಲ್ಲಾಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳು, ಸಿಟ್ಟು, ಹಠಮಾರಿತನ, ಖಿನ್ನತೆ, ವ್ಯಕ್ತಿಪೂಜೆಯ ಪ್ರವೃತ್ತಿ, ದುಂದುವೆಚ್ಚ, ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಲೈಂಗಿಕತೆ, ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳಿಗೆ ಬಲಿಯಾಗುವುದು ಈ ಎಲ್ಲಾ ವಿಷಯಗಳ ಕುರಿತು ಮಾನವೀಯ ಕಾಳಜಿಯಿರುವ ವೈದ್ಯೆ ಡಾ. ಮಣಿಕರ್ಣಿಕಾ ಅವರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.