ಕಿಶೋರ ಸೂತ್ರ

Author : ಸಿ. ಎ. ಕಿಶೋರ್

Pages 178

₹ 300.00




Year of Publication: 2018
Published by: ಭಾರತೀಯ ಆಯುರ್ವೇದ ಪ್ರತಿಷ್ಠಾನ

Synopsys

ಇಂದಿನ ಕಾಲಘಟ್ಟದಲ್ಲಿ ಆಯುರ್ವೇದ ಚಿಕಿತ್ಸೆಗೆ ಅತ್ಯಂತ ಮಹತ್ವವಿದೆ. ಆಯುರ್ವೇದ ಇಂದು ತನ್ನ ಗತಕಾಲದ ವೈಭವವನ್ನು ಮತ್ತೆ ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ದೃಶ್ಯ ಮಾಧ್ಯಮಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಆಯುರ್ವೇದದ ಕುರಿತು ಜನರಿಗೆ ಮಾಹಿತಿ ನೀಡಿರುವ ಡಾ ಕಿಶೋರ್‍ ಅವರು ಈ ಬಾರಿ ಸುಮಾರು 101 ದೈಹಿಕ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಸೂತ್ರಗಳೊಂದಿಗೆ ಪುಸ್ತಕವನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಯಾವುದೇ ಮದ್ದಿನ ಕುರಿತು ತಿಳಿವಳಿಕೆ ನೀಡುವಾಗ ಭಾಷಾ ವೈಫಲ್ಯದಿಂದ ಅದರ ಅರಿವಾಗುವುದು ಕಷ್ಟ ಸಾಧ್ಯ. ಆದರೆ ಈ ಪುಸ್ತಕದಲ್ಲಿ ಸಮಾನ್ಯವಾಗಿ ಬಳಸುವ ಭಾಷಾ ಶೈಲಿಯಲ್ಲಿ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿದ್ದಾರೆ ಲೇಖಕರು. ಈ ಕಿಶೋರ ಸೂತ್ರವು ವಾಸ್ತವವಾಗಿ ಆಯುರ್ವೇದ ವೈದ್ಯ ಪದ್ಧತಿಯ ಸರಳೀಕೃತ ರೂಪವೆಂದೇ ಹೇಳಬಹುದು. ಅಂತರಾಷ್ಟ್ರಿಯ ಗುಣಮಟ್ಟದ ಮುದ್ರಣವನ್ನು ಕಂಡಿರುವ ಈ ಪುಸ್ತಕ ಮುಖಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಆಕರ್ಷಕವಾಗಿ ಮೂಡಿಬಂದಿದೆ. ಪುಸ್ತಕದ ರಚನೆಯಲ್ಲಿ ಅನುಸರಿಸಿದ ವಿಧಾನ ಮತ್ತು 500ಕ್ಕೂ ಮಿಕ್ಕಿ ವರ್ಣಚಿತ್ರಗಳು ಚಿಕಿತ್ಸಾ ಸೂತ್ರಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇನ್ನೂ ಸಹಕಾರಿಯಾಗುತ್ತವೆ.

About the Author

ಸಿ. ಎ. ಕಿಶೋರ್

ಡಾ. ಸಿ.ಎ. ಕಿಶೋರ್ ಅವರು ನಾಡಿನ ಹೆಸರಾಂತ ಆಯುರ್ವೇದ ವೈದ್ಯರಲ್ಲಿ ಒಬ್ಬರು. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ, ಟೀವಿ ಚಾನೆಲ್ಲುಗಳಲ್ಲಿ ಅವರು ನಡೆಸಿ ಕೊಟ್ಟಿರುವ ಕಾರ್ಯಕ್ರಮಗಳೂ ಸಾಕಷ್ಟು ಜನಪ್ರಿಯವಾಗಿವೆ.  'ಓ ಮನಸೇ' ಪತ್ರಿಕೆಗೆ ಅಂಕಣಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಅವರು ಇಂಡಿಯಾ ಆಯುರ್ವೇದಿಕ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಾಗಿ,  ಶಾಸ್ತ್ರೀಸ್ ಆಯುರ್ಧಾಮ ವೈದ್ಯಕೀಯ ಕೇಂದ್ರದ ನಿರ್ದೇ ಶಕರು ಮತ್ತು ಸಲಹೆಗಾರರಾಗಿದ್ದಾರೆ.     ...

READ MORE

Related Books