ಡಾ. ಎಚ್.ಎಸ್. ಮೋಹನ ಅವರ ವೈದ್ಯಕೀಯ ಕೃತಿ-ಕಣ್ಣು : ವಿವಿಧ ಕಾಯಿಲೆಗಳು ಮತ್ತು ಪರಿಹಾರೋಪಾಯಗಳು. ಕಣ್ಣು ಕುರಿತೇ ಅವರು ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಕಣ್ಣಿನ ರಚನೆ, ಸಮಸ್ಯೆಗಳು ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ತುಂಬಾ ವಿಸ್ತೃತ ಚರ್ಚಿಸಿದ, ಮಾಹಿತಿ ನೀಡಿದ ಸಮಗ್ರ ಕೃತಿ.
ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ. ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು. ...
READ MORE