ಜೀವನ ಮತ್ತು ಆರೋಗ್ಯ ಲೇಖಕ ಡಾ. ಎಂ.ಬಿ. ರಾಮಮೂರ್ತಿ ಅವರ ಕೃತಿ. ಇದು ಆರೋಗ್ಯದ ಮಾಹಿತಿ ನೀಡುವ ಕೈಪಿಡಿ ಎನ್ನಬಹುದು. ಪತ್ರಕರ್ತೆ ಗೌರಿ ಲಂಕೇಶ್ ಬೆನ್ನುಡಿ ಬರೆದಿದ್ದು, ‘ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲ ವಯೋಮಾನದವರನ್ನು ತಾಕಬಹುದಾದ, ಪೀಡಿಸಬಹುದಾದ ಕಾಯಿಲೆಗಳ ಬಗ್ಗೆ ಪರಿಚಯ, ಮಾಹಿತಿ ಮತ್ತು ಅವುಗಳನ್ನು ನಿವಾರಿಸಿಕೊಳ್ಳುವ ಮಾರ್ಗಗಳನ್ನು ರಾಮಮೂರ್ತಿ ವಿವರಿಸಿದ್ದಾರೆ. ಅದನ್ನೆಲ್ಲ ಎಷ್ಟು ಸರಳ ಭಾಷೆ ಮತ್ತು ಶೈಲಿಯಲ್ಲಿ ನೀಡಿದ್ದಾರೆಂದರೆ ಓದುಗರಿಗೆ ಅದು ಸುಲಭವಾಗಿ ಅರ್ಥವಾಗುತ್ತದಲ್ಲದೇ ಕಾಯಿಲೆಗಳ ಬಗೆಗಿರುವ ಭಯವನ್ನು ನಿವಾರಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ, ನಮ್ಮ ಸುತ್ತ ಇರುವವರ ದೈಹಿಕ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತ ನೆರವನ್ನು ನೀಡುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.