ಜೈನ ವೈದ್ಯಕೀಯ ಪರಂಪರೆ

Author : ಧನ್ಯಕುಮಾರ ಇಜಾರಿ

Pages 322

₹ 150.00




Year of Publication: 2004
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಜಗತ್ತಿನ ವೈದ್ಯಕೀಯ ಶಾಸ್ತ್ರಕ್ಕೆ ಜೈನ ಧನ್ವಂತರಿಗಳು ನೀಡಿರುವ ಕೊಡುಗೆ, ಜೈನ ಆಯುರ್ವೇದ ಪರಂಪರೆಯ ಪ್ರಮುಖ ಗ್ರಂಥಗಳ ವಿಶ್ಲೇಷಣೆ ಹಾಗೂ ಆ ಗ್ರಂಥಗಳಲ್ಲಿನ ಆಯುರ್ವೇದ ಮೂಲಸಿದ್ದಾಂತಗಳ ಮೂಲಕ ಕಂಡುಕೊಳ್ಳಲಾದ ರೋಗಕಾರಣಗಳು, ಪ್ರತಿಬಂಧಕೋಪಾಯ ಗಳು, ಮನೆಮದ್ದು, ರಸೌಷಧಗಳು, ರೋಗ ನಿಧಾನ, ರೋಗ ಪರೀಕ್ಷೆ ಹಾಗೂ ಚಿಕಿತ್ಸೆಯ ಮೂಲಸೂತ್ರಗಳ ಬಗ್ಗೆ ಸಮಗ್ರ ವಿವರಣೆ, ಸವಿವರವಾದ ಮಾಹಿತಿ ಈ ಕೃತಿಯಲ್ಲಿದೆ. ಜೈನ ವೈದ್ಯಕೀಯ ಪರಂಪರೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಅಪರೂಪದ ಗ್ರಂಥವಿದು. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಜೈನಾಯುರ್ವದ ಹುಟ್ಟಿದ ಬಗೆ; ವೈದ್ಯಕೀಯ ಶಾಸ್ತ್ರಕ್ಕೆ ಜೈನರ ಕೊಡುಗೆ ,ಜೈನಾಯುರ್ವೆದದ ವೈಶಿಷ್ಟ್ಯಗಳು; ಜೈನ ಆಯುರ್ವೇದ ಹರಹರ . ಕಲ್ಯಾಣಕಾರಕ ಒಂದು ಅಧ್ಯಯನ ,ಖಗೇಂದ್ರಮಣಿ ದರ್ಪಣ ,ಶರೀರ ರಚನೆ; ಆರೋಗ್ಯ ಜೀವನ; ಋತುಚರ್ಯೆ; ಮಗುವಿನ ಪಾಲನೆ ಪೋಷಣೆ ,ಆಯುರ್ವೇದ ಮೂಲ ಸಿದ್ಧಾಂತಗಳು; ದ್ರವ್ಯಗಳ ರಸ, ವೀರ್ಯ, ವಿಪಾಕ, ಪ್ರಭಾವಗಳು ,ಕೆಲವು ಉಪಯುಕ್ತ ಮನೆ ಮದ್ದುಗಳು; ದ್ರವ್ಯಗುಣ, ಔಷಧ ತಯಾರಿಕೆ ಹಾಗೂ ಪಠ್ಯಕ್ರಮಗಳು ,ರಸೌಷಧಗಳು; ರೋಗಕಾರಣಗಳು ಹಾಗೂ ಪ್ರತಿಬಂಧಕೋಪಾಯಗಳು ,ರೋಗ ನಿಧಾನ ಹಾಗೂ ರೋಗಿ ಪರೀಕ್ಷೆ; ಚಿಕಿತ್ಸೆಯ ಮೂಲಸೂತ್ರಗಳು ,ಸಾಮಾನ್ಯ ರೋಗಗಳ ಚಿಕಿತ್ಸೆ ಜೈನ ಪರಂಪರೆಯ ಆಯುರ್ವೇದ ಪದ್ಧತಿ, ಅದರ ಸಂಶೋಧನಾತ್ಮಕ ಇತಿಹಾಸ.

Related Books