ಸ್ವತಃ ಮಹಿಳೆ ಕಲಿತುಕೊಳ್ಳಬೇಕಾದ ನೂತನ ತಂತ್ರಗಳ ಬಗ್ಗೆ, ಸಮಾಜ ಪುರುಷ ಮಕ್ಕಳಿಗೆ ಕಲಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ಲೇಖಕ ಕೆ.ಎಸ್.ಪವಿತ್ರ ರವರು ಒದಗಿಸಿದ್ದಾರೆ. ಆಧುನಿಕ ಮಹಿಳೆ ಆರ್ಥಿಕ, ಸಾಮಾಜಿಕ ಸ್ವಾವಲಂಬನೆಯನ್ನು ಪಡೆದು ಮಾನಸಿಕ ನೆಮ್ಮದಿ ಗಳಿಸಬೇಕಾದರೆ ಇಡೀ ಸಮಾಜ ಒಂದಷ್ಟು ಮೂಲಭೂತವಾದನ್ನು ಬಿಡಬೇಕು ಹಾಗು ತನ್ನ ಸಾಂಪ್ರದಾಯಿಕ ಧೋರಣೆಗಳಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕು. ಮಹಿಳಾ ರೋಗಿಗಳ ನೋವು, ಸುತ್ತಮುತ್ತಲಿನ ಸಮಾಜಕ್ಕೆ ರೋಗಿಯಂತೆ ಕಾಣಿಸಿಕೊಳ್ಳದೆಯೂ ಭಾವನಾತ್ಮಕವಾಗಿ ತೊಳಲಾಟಕ್ಕೆ ಸಿಲುಕಿದ ಹೆಣ್ಮಕ್ಕಳ ನೋವುಗಳನ್ನು ನಿರೂಪಣಾ ಶೈಲಿಯಲ್ಲಿ ಈ ಕೃತಿಯಲ್ಲಿ ಕಟ್ಟಿಕೊಡಲಾಗಿದ್ದು ಮಹಿಳಾ ಸ್ವಾಭಿಮಾನವನ್ನು ಎತ್ತಿ ಹಿಡಿದಿದೆ.
©2024 Book Brahma Private Limited.