ಡಾ. ಲೀಲಾವತಿ ದೇವದಾಸ ಅವರ ಕೃತಿ-ಹೆಣ್ಣೇ, ನಿನ್ನ ಆರೋಗ್ಯ ಕಾಪಾಡಿಕೋ...’ ಹೆಣ್ಣು-ಗಂಡು ಎನ್ನದೇ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಆರೋಗ್ಯ ಭಾಗ್ಯದ ಮುಂದೆ ಯಾವ ಸಂಪತ್ತೂ ಇಲ್ಲ. ಈ ಮಾತು ಆಧ್ಯಾತ್ಮಿಕವಲ್ಲ; ಇದು ವಾಸ್ತವವೂ ಕೂಡ. ಅದರಲ್ಲೂ, ಹೆಣ್ಣಿನ ಆರೋಗ್ಯದ ಪರಿಕಲ್ಪನೆಯೂ ಗಂಡಿನ ಆರೋ ಗ್ಯಕ್ಕಿಂತಲೂ ಭಿನ್ನ. ಈ ಹಿನ್ನೆಲೆಯಲ್ಲಿ, ಹೆಣ್ಣನ್ನು ಉದ್ದೇಶಿಸಿ ನೀಡಿರುವ ಅತ್ಯುತ್ತಮವಾದ ಸಲಹೆಗಳು ವೈದ್ಯಕೀಯವಾಗಿ ಹೆಣ್ಣಿಗೆ ನೆರವಾಗಲಿವೆ.
ವೃತ್ತಿಯಲ್ಲಿ ವೈದ್ಯರಾದ ಲೀಲಾವತಿ ದೇವದಾಸ್ ಅವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಬರಹಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಜನಿಸಿದ್ದು 1930 ಮಾರ್ಚ್ 30ರಂದು. ವೈದ್ಯಕೀಯ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳೆಂದರೆ ಸ್ತ್ರೀ ಸಂಜೀವಿನಿ, ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ?, ಹೆರಿಗೆ, ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ, ಗರ್ಭಕೋಶದ ಕ್ಯಾನ್ಸರ್ ಅನ್ನು ದೂರವಿರಿಸಿ, ನಾನು ಗೌರಿಯ ಗರ್ಭಕೋಶ (ವೈದ್ಯಕೀಯ ಕೃತಿಗಳು), ಆಸ್ಪತ್ರೆಯಲ್ಲಿ ಹಾಸ್ಯ, ಮುಸುಕಿನ ಗುಡದ್ದು, ಕನ್ನಡ ವೈದ್ಯ ವಿಶ್ವಕೋಶ, ಬೈಬಲ್ಲಿನ ಅನಾಮಿಕ ಸ್ತ್ರೀಯರು ಮುಂತಾದವು. ಇವರಿಗೆ ಅತ್ತಿಮಬ್ಬೆ ...
READ MORE