‘ಹೆಲ್ತಿ ಲೈಫ್ ಸ್ಟೈಲ್ ಎಂದರೇನು’ ಡಾ. ಪೂರ್ಣಿಮಾ ಕೋಡೂರು ಅವರ ಲೇಖನ ಸಂಕಲನ. ಕೆಲವೊಮ್ಮೆ ಕೆಲವೊಬ್ಬರು ದೈಹಿಕವಾಗಿ ನೋಡಲು ತುಂಬಾ ಸುಂದರವಾಗಿರುತ್ತಾರೆ. ಆದರೆ ಅವರ ಮನಸ್ಸಿನ ಬಗ್ಗೆ ಕೇಳಿ ನೋಡಿ. ಅದು ಆರೋಗ್ಯದಿಂದಿರುವುದಿಲ್ಲ, ಮನಸ್ಸು ನೆಮ್ಮದಿ ಕಳೆದುಕೊಂಡು ಒದ್ದಾಡುತ್ತಿರುತ್ತದೆ. ಅದೇ ಇನ್ನೂ ಕೆಲವರು ಮಾನಸಿಕವಾಗಿ ಸಂತೃಪ್ತಿಯಿಂದಿರುತ್ತಾರೆ. ಆದರೆ ದೈಹಿಕವಾಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಂಡಿರುತ್ತಾರೆ. ಒಂದಿದ್ದರೆ ಇನ್ನೊಂದಿಲ್ಲ ಎನ್ನುವಂತಹ ಸ್ಥಿತಿಯಿದು. ನಿಮ್ಮ ವ್ಯಕ್ತಿತ್ವ ಹತ್ತು ಜನರ ಮೆಚ್ಚುಗೆ ಗಳಿಸಬೇಕೆಂದರೆ, ಮಾನಸಿಕ ಮತ್ತು ದೈಹಿಕ ಆರೋಗ್ಯವೆರಡೂ ಜೊತೆಯಾಗಬೇಕು. ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಗಾಗಿ ಖ್ಯಾತಿ ಗಳಿಸಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಇಂತಹ ವಿಷಯಗಳನ್ನೊಳಗೊಂಡ ಲೇಖನಗಳ ಸಂಕಲನವೇ ಹೆಸ್ತಿ ಲೈಫ್ ಸ್ಟೈಲ್ ಎಂದರೇನು, ಈಗಾಗಲೇ ರೋಗ ನಿವಾರಣೆಗೆ ಮನೆಮದ್ದು, ತರಕಾರಿಗಳಲ್ಲಿರುವ ಔಷಧೀಯ ಗುಣಗಳು, ಸರ್ವರೋಗಕ್ಕೆ ಸುಲಭ ಚಿಕಿತ್ಸೆ, ಅಂದದ ಆರೋಗ್ಯದ ಆಪ್ತವೈದ್ಯ, ಆಯುರಾರೋಗ್ಯಕ್ಕೆ ಆಯುರ್ವೇದ, ಉತ್ತಮ ಆರೋಗ್ಯಕ್ಕೆ ಆಯುರ್ವೇದದ ಮೂಲಮಂತ್ರಗಳು ಮತ್ತು ಒನ್ ಲೈನ್ ನಾಲೆಡ್ಜ್ ಪುಸ್ತಕಗಳನ್ನು ಬರೆದು ಖ್ಯಾತಿ ಗಳಿಸಿರುವ ಇವರ ಎಂಟನೇ ಕೃತಿ ಇದಾಗಿದೆ.
©2024 Book Brahma Private Limited.