ಪ್ರಸ್ತುತ ಹೆಚ್ಚುಜನರು ತುತ್ತಾಗುವ ಕಾಯಿಲೆಯಾದ ಮಧುಮೇಹದ ಕುರಿತು ಪ್ರಾಥಮಿಕ ಹಂತದಲ್ಲಿ ಹೇಗೆ ತಡೆಗಟ್ಟಬೇಕು ಮತ್ತು ಅವುಗಳನ್ನು ನಿಭಾಯಿಸುವ ಕ್ರಮವನ್ನು ಲೇಖಕ ಕೆ.ರಾಮಚಂದ್ರ ಈ ಕೃತಿಯಲ್ಲಿ ವಿವರಿಸಿದ್ದಾರೆ. ಡಯಾಬಿಟಿಸ್ ಅಥವಾ ಮಧುಮೇಹ ಆಧುನಿಕ ಜಗತ್ತಿನ ಸಾಮಾನ್ಯ ರೋಗ ಎನ್ನುವಷ್ಟು ಸಹಜವಾಗಿದೆ . ಎಳೆವಯಸ್ಸಿನ ಮಕ್ಕಳಿಂದ ವಯೋವೃದ್ಧರವರೆಗೆ ಇದು ನಾನಾ ರೂಪದಲ್ಲಿ ಮನುಷ್ಯನನ್ನು ತಗುಲುತ್ತದೆ. ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ, ಇದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾದರು ,ನಮಗೆ ಇದರ ಬಗ್ಗೆ ಮಾಹಿತಿಯ ಕೊರತೆ ಇರುವ ಕಾರಣಕ್ಕೆ ಔಷಧಿಯನ್ನೇ ಅವಲಂಭಿಸಿ ಬದುಕನ್ನು ಸಪ್ಪೆಯಾಗಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟವಾಗುತ್ತದೆ. ಲೇಖಕರು ಈ ಕೃತಿಯಲ್ಲಿ ಮಧುಮೇಹದ ಪ್ರಾಥಮಿಕ ಜ್ಞಾನವನ್ನು ನೀಡುವುದರ ಜೊತೆಗೆ ಅದನ್ನು ನಿಭಾಯಿಸುವ ಬಗೆಯನ್ನು ವಿವರಿಸಿದ್ದಾರೆ.
©2024 Book Brahma Private Limited.