ದೈಹಿಕ ಕಾಯಿಲೆಗಳು ಮತ್ತು ಕಣ್ಣು

Author : ಎಚ್. ಎಸ್. ಮೋಹನ್

Pages 128

₹ 90.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 0802220358001

Synopsys

ಪಂಚೇಂದ್ರಿಯಗಳು ಜ್ಞಾನದ ಹೆಬ್ಬಾಗಿಲುಗಳು. ಅದರಂತೆ ರೋಗಗಳ ಪ್ರವೇಶಕ್ಕೂ ಅವು ಮಾರ್ಗಗಳೇ ಆಗಿವೆ. ಆ ಪೈಕಿ ಕಣ್ಣುಗಳ ಆರೈಕೆ, ತಪ್ಪಿದರೆ, ಕಣ್ಣುಗಳು ಉಳಿದ ರೋಗಗಳಿಗೆ ಹೇಗೆ ಕಾರಣವಾಗುತ್ತದೆ. ಕಣ್ಣುಗಳ ವಿವಿಧ ರೋಗಗಳು ಹೀಗೆ ವಿವರವಾದ ಆರೋಗ್ಯ -ವೈದ್ಯಕೀಯ ಕಾರಣಗಳತ್ತ ಈ ಕೃತಿ ಓದುಗರ ಗಮನ ಸೆಳೆಯುತ್ತದೆ. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿನಿಧಿ ಪ್ರಶಸ್ತಿ’(2013) ಲಭಿಸಿದೆ.

About the Author

ಎಚ್. ಎಸ್. ಮೋಹನ್
(31 August 1955)

ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ.  ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು.  ...

READ MORE

Reviews

(ದೈಹಿಕ ಕಾಯಿಲೆಗಳು ಮತ್ತು ಕಣ್ಣು, ಹೊಸತು ಜನವರಿ 2014, ಪುಸ್ತಕದ ಪರಿಚಯ)

ನಮ್ಮ ದೇಹದ ಒಂದೊಂದು ಅಂಗಕ್ಕೂ ಒಬ್ಬೊಬ್ಬ ತಜ್ನವೈದ್ಯ ಬರುವ ಕಾಲವಿದು, ಹಾಗಿದ್ದಾಗ ನೇತ್ರವೈದ್ಯರು ಕಣ್ಣು ಪರೀಕ್ಷೆ ಮಾಡುವಾಗ ದೇಹದ ಇನ್ನಿತರ ಕಾಯಿಲೆಗಳ ಬಗ್ಗೆ ಸುಳಿವು ನೀಡಬಲ್ಲರೆ 2 ಕಣ್ಣು ಹಳದಿ ಬಣ್ಣಕ್ಕೆ ತಿರುಗಿದೆಯೆ ? ಕಾಮಾಲೆ ಎಂದು ನಮಗೂ ಗೊತ್ತು. ಕಣ್ಮುಂದೆ ಬೆಳಕು. ಆಡಿದಂತೆ ಎನ್ನಿಸುವುದೇ ? ಸ್ವಲ್ಪ ಹೊತ್ತಿನಲ್ಲಿ ನಿಮಗೆ ತಲೆನೋವು ವಾಂತಿ ಬರಬಹುದು. ಕಣ್ಣು ಇದ್ದಕ್ಕಿದ್ದಂತೆ ಮಂಜಾಯಿತೇ ? ನಿಮಗೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರಬಹುದು! ಹಾಗಾಗಿ ಕಣ್ಣಿನ ತೊಂದರೆ ಕೇವಲ ಕಣ್ಣಿಗೆ ಮಾತ್ರ ಸೀಮಿತವಲ್ಲ; ತಜ್ಞ ನೇತ್ರವೈದ್ಯರು ತಮ್ಮ ಅನುಭವದಿಂದ ದೇಹದ ಇತರ ಕಾಯಿಲೆಗಳನ್ನೂ ಸಹ ಪತ್ತೆಹಚ್ಚಬಲ್ಲರೆಂದು. ಈ ಕೃತಿಯ ವೈದ್ಯಲೇಖಕರು ಹೇಳುತ್ತಾರೆ. ಕೆಲವು ದೈಹಿಕ ಕಾಯಿಲೆಗಳು ಕಣ್ಣಿನಲ್ಲಿ ವ್ಯಕ್ತವಾಗುವ ಲಕ್ಷಣ – ಸೂಕ್ಷ್ಮ ವ್ಯತ್ಯಾಸಗಳಿಂದ ತಿಳಿದುಬರುತ್ತವೆ. ಅನುಮಾನಿಸಿ ಇತರ ವೈದ್ಯರಲ್ಲಿ ತಪಾಸಣೆಗೆ ಕಳಿಸಿದಾಗ ಈ ರೋಗವು ದೃಢಪಟ್ಟು ಚಿಕಿತ್ಸೆ ಮಾಡಿದಾಗ ಕಣ್ಣಿನ ತೊಂದರೆ ತಂತಾನ ನಿವಾರಣೆಗೊಂಡಿದೆ. ಸಾಕಷ್ಟು ಚಿತ್ರಗಳಿದ್ದು ನೀವು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲಿಂ. ಗೊಂದಲವೂ ಇಲ್ಲ. ಇಷ್ಟಲ್ಲದೆ ದೈಹಿಕ ಕಾಯಿಲೆಗಳಿಂದ ನಮ್ಮ ಕಣ್ಣುಗಳಿಗೂ ಅಪಾರ ಹಾನಿ ಸಂಭವಿಸಬಹುದು. ಆಮೂಲಾಗ್ರವಾಗಿ ಈ ಪುಸ್ತಕವನ್ನೋದಿ. ನಿಮ್ಮ ದೇಹ ಕಣ್ಣುಗಳನ್ನು ಜೋಪಾನವಾಗಿ ನೋಡಿಕೊಳ್ಳಿ.

 

Related Books