ಪ್ರಾಚೀನ ಭಾರತೀಯ ವೈದ್ಯವಿಜ್ಞಾನದ ಮಹಾ ಭಂಡಾರ ಚರಕ ಸಂಹಿತೆ. ಇದನ್ನು ಬರೆದ ಚರಕಾಚಾರ್ಯರ ವಿಚಾರ ಇಂದಿಗೂ ಮನನೀಯ. ಚರಕಾಚಾರ್ಯರು, ವೈದ್ಯನಾಗಬೇಕೆಂದು ಬರುವ ಎಲ್ಲರನ್ನೂ ವಿದ್ಯಾರ್ಥಿಗಳನ್ನಾಗಿ ಸ್ವೀಕರಿಸುತ್ತಿರಲಿಲ್ಲ. ಬದಲಿಗೆ ತಮ್ಮದೇ ಆದ ಮಾನದಂಡಗಳಿಗನುಗುಣವಾಗಿ, ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ನೈತಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದ, ವೈದ್ಯ ಅಧ್ಯಾಪಕರನ್ನು ಆಯ್ಕೆ ಮಾಡುವಾಗಲೂ ಹಲವು ಮಾನದಂಡಗಳನ್ನು ವಿಧಿಸುತ್ತಿದ್ದ ಕುತೂಹಲ ಸಂಗತಿಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ.
©2024 Book Brahma Private Limited.