ಇಂದಿನ ಜೀವನ ಶೈಲಿಯ ಪರಿಣಾಮವಾಗಿ ಬಹು ಜನರನ್ನು ದೈಹಿಕ ಹಾಗೂ ಮಾನಸಿಕವಾಗಿ ಕಾಡುವ ರೋಗ-ಕ್ಯಾನ್ಸರ್. ಈ ಕುರಿತು ’ಕ್ಯಾನ್ಸರ್ ಬಹು ವಿಧದ ಅಸ್ವಸ್ಥತೆ’ ಕೃತಿಯನ್ನು ಲೇಖಕಿ ಡಾ. ಎಸ್.ಎಸ್. ಮಾಲಿನಿ ಬರೆದಿದ್ದಾರೆ. ಕ್ಯಾನ್ಸರ್ ಕುರಿತ ವೈದ್ಯಕೀಯ ವಿವರಣೆಯೊಂದಿಗೆ ರೋಗಿಯ ಪರಿಸ್ಥಿತಿ, ಜಾಗೃತಿಯ ಅಗತ್ಯ ಕುರಿತ ವಿವರಣೆ ಇಲ್ಲಿದೆ.
ಲೇಖಕಿ, ಪ್ರಾಧ್ಯಾಪಕಿ ಡಾ. ಎಸ್.ಎಸ್. ಮಾಲಿನಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮಾನವ ತಳಿಶಾಸ್ತ್ರ ಪ್ರಯೋಗಾಲಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಂಶೀಯ ಕಾಯಿಲೆಗಳು, ಕ್ಯಾನ್ಸರ್ ಇವರ ಪ್ರಮುಖ ಕೃತಿಗಳು. ...
READ MORE