ಆರೋಗ್ಯ ತರಂಗ

Author : ಪಿ. ಸತ್ಯನಾರಾಯಣ ಭಟ್

Pages 144

₹ 115.00




Year of Publication: 2020
Published by: ವಸಂತ ಪ್ರಕಾಶನ
Address: #360, 10 ನೇ ʼಬಿʼ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ ಬೆಂಗಳೂರು 560011

Synopsys

ಲೇಖಕ ಪಿ. ಸತ್ಯನಾರಾಯಣ ಭಟ್‌ ಅವರ ʼಆರೋಗ್ಯ ತರಂಗʼ ಕೃತಿ ಆರೋಗ್ಯದ ಚಿಂತನೆಯ ಕುರಿತ ಪುಸ್ತಕವಾಗಿದೆ. ಡಾ. ವಸುಂದರಾ ಭೂಪತಿ ಅವರು ಕೃತಿಯನ್ನು ಸಂಪಾದಿಸಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎದುರಾಗುವ ದೈಹಿಕ, ಮಾನಸಿಕ ಹಾಗೂ ಅನಾರೋಗ್ಯದ ವಿಚಾರಗಳನ್ನು ಒಳಗೊಂಡ ಬರಹಗಳಿವೆ. ಆರ್ಯುರ್ವೇದದ ಮೊದಲ ಗುರಿ ರೋಗರಹಿತ ಸಮಾಜದ ನಿರ್ಮಾಣವಾಗಿದ್ದು, ಪ್ರಸ್ತುತ ಜೀವನಶೈಲಿಯಲ್ಲಿ ಅನುಸರಿಸಬೇಕಾದ ಶಿಸ್ತಿನ ಕುರಿತು ಈ ಪುಸ್ತಕ ಮಾಹಿತಿ ನೀಡುತ್ತದೆ.

ಲೇಖಕರು ಹೇಳುವಂತೆ, ಅವರ ಬಾಲ್ಯದ ದಿನಗಳಲ್ಲಿ ಆಧುನಿಕ ರೀತಿಯ ವೈದ್ಯಕೀಯ ಸವಲತ್ತುಗಳಿರಲಿಲ್ಲ. ಆಸ್ಪತ್ರೆಗಳು ಅತಿ ವಿರಳವಾಗಿದ್ದು, ಜನ ಸಮುದಾಯಗಳು ಆರೋಗ್ಯಯುತ ಜೀವನ ನಡೆಸುತ್ತಿದ್ದರು. ಅಂತಹ ಸಾಮಾಜಿಕ ಕಾಳಜಿಯ ಸದುದ್ದೇಶಗಳನ್ನು ಒಳಗೊಂಡು ಈ ಕೃತಿಯ ಲೇಖನಗಳು ಅರಳುತ್ತವೆ. ಪ್ರಾಕೃತಿಕವಾಗಿ ನಾವು ಗಿಡ ಮರಗಳಿಂದ ಪಡೆಯುವ ಹಸಿರು ಉಸಿರು ಹಾಗೂ ಸದಾ ಆರೋಗ್ಯವೇ ಈ ಕಿರು ಹೊತ್ತಿಗೆಯ ಹೂರಣವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.

About the Author

ಪಿ. ಸತ್ಯನಾರಾಯಣ ಭಟ್

ಡಾ. ಸತ್ಯನಾರಾಯಣ ಭಟ್ ಪಿ. ಅವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದವರು.  ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಹಾಗೂ ಚಿನ್ನದ ಪದಕ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ. 1980ರಲ್ಲಿ  ಸಸ್ಯಶಾಸ್ತ್ರದಲ್ಲಿ ಪಿಹೆಚ್ .ಡಿ ಪದವಿ. ಅಂಕಣ ಬರಹಗಳನ್ನು ಸೇರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ಧಾರೆ. ಅವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು ವಿಶ್ವದ ಹದಿನಾರು ದೇಶಗಳಲ್ಲಿ ಸಸ್ಯ ಮತ್ತು ಜೀವ ಜಾಲ ಪ್ರಭೇದ, ಜನಜೀವನವನ್ನು ಅಧ್ಯಯನ ಮಾಡಿದ್ದಾರೆ. `ಆಯುರ್ವೇದ ಪಿತಾಮಹ : ಪಿ ಟಿ ...

READ MORE

Related Books