ಡಾ.ಎಂ.ವಿ.ರೇಣುಕಾರ್ಯ ರವರು ತಮ್ಮ 50 ವರ್ಷದ ಸುಧಿರ್ಘ ವೈದ್ಯಕೀಯ ಅನುಭದಲ್ಲಿ ತಾವು ಕಂಡ ಆರೋಗ್ಯದ ಬಗ್ಗೆ ಜನರಿಗೆ ಇರುವ ಮೂಢನಂಬಿಕೆಗಳನ್ನು ಈ ಕೃತಿಯ ಮೂಲಕ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ತಮ್ಮ ಐವತ್ತು ವರ್ಷಗಳ ವೈದ್ಯಕೀಯ ಅನುಭವದಲ್ಲಿ ತಾವು ಕಂಡುಕೊಂಡ ಆರೋಗ್ಯದ ಕುರಿತಂತೆ ಜನಸಾಮಾನ್ಯರ ತಪ್ಪು ಕಲ್ಪನೆಗಳು, ಭ್ರಮೆಗಳು, ಮೂಢನಂಬಿಕೆಗಳನ್ನು ವೈಜ್ಞಾನಿಕ ನಿಟ್ಟಿನಲ್ಲಿ ವಿಶ್ಲೇಷಿಸಿದ ಇವರು ಅವೆಲ್ಲವನ್ನು ಅಲ್ಲಗೆಳೆದಿದ್ದಾರೆ. ಮೂಢನಂಬಿಕೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಉಪಯುಕ್ತ ಮಾಹಿತಿಯನ್ನೂ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.