ಪ್ರಸ್ತುತ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ತಮ್ಮ ವಿರಾಟ್ ರೂಪ ತಾಳುತ್ತಿರುವ ಈ ಸಂದರ್ಭದಲ್ಲಿ ವೈದ್ಯಲೋಕದ ಮಾಹಿತಿಗಳು, ಜಾಗೃತಿ ವಿಷಯಗಳು ಜನಸಾಮಾನ್ಯರಿಗೆ ಬಹಳ ಸುಲಭವಾಗಿ ದೊರಕುತ್ತದೆ. ಆದರೆ ಜನಸಾಮಾನ್ಯರಿಗೆ ದೊರಕಿದ ಮಾಹಿತಿ ಅವರಲ್ಲಿ ಹಲವಾರು ಗೊಂದಲಗಳನ್ನು ಉಂಟುಮಾಡುತ್ತವೆ. ಸೂಕ್ತ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದ ಜನ, ಅನಗತ್ಯ ಆತಂಕ, ಗೊಂದಲ, ಭಯ ಸೃಷ್ಟಿಸುವಂತಹ ಆರೋಗ್ಯ ಮಿಥ್ಯೆ ಮಾಹಿತಿಗಳನ್ನು , ಯಾವುದೇ ಮುಲಾಜಿ ಇಲ್ಲದೆ ಸಿಕ್ಕಿದ ಮಾಹಿತಿ ಎಲ್ಲವೂ ಸತ್ಯವೆಂದು ನಂಬಿ ಸುಲಭವಾಗಿ ಮೋಸ ಹೋಗುತ್ತಾರೆ. ಈ ನಿಟ್ಟಿನಲ್ಲಿ ಆರೋಗ್ಯ ಮಾಹಿತಿಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು, ಯಾವುದು ಅಧಿಕೃತ ಮಾಹಿತಿ , ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು”ಲೇಖಕ ಎನ್. ಗೋಪಾಲಕೃಷ್ಣ”ರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.