ವಿಜ್ಞಾನ ಮತ್ತು ಆರೋಗ್ಯ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದವರಲ್ಲಿ ಪ್ರಮುಖರು ಎನ್. ಗೋಪಾಲಕೃಷ್ಣ. ಅನುವಾದದಲ್ಲೂ ಕೃಷಿ ಸಾಧಿಸಿದ್ದಾರೆ. ಆರೋಗ್ಯ ಸಂವಹನ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಕ್ಷಿಪ್ತ ಕೃಷಿ-ಪರಿಸರ ಸಚಿತ್ರ ಶಬ್ದಾರ್ಥ ಕೋಶ, ನಗುವಿನಿಂದ ಆರೋಗ್ಯವೃದ್ಧಿ, ಆರೋಗ್ಯ ಮಾಹಿತಿಯ ಸದುಪಯೋಗ, ಮೂಡ್ ಸರಿಪಡಿಸುವ ಥೆರಪಿ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?, ಆಪ್ತಸಲಹೆ, ಆಧುನಿಕ ಜೀವನದಲ್ಲಿ ಆರೋಗ್ಯ ಸಂರಕ್ಷಣೆ ಹೇಗೆ? ಆರೋಗ್ಯ ದರ್ಶನ, ಮಿದುಳಿನ ಶಕ್ತಿ, ವಿಶ್ವದಿನ ವಿಶೇಷ ದಿನ, ಆರೋಗ್ಯ ಜ್ಞಾನ ನಿಮಗೇಕೆ ಬೇಕು? ನಿವೃತ್ತ ಜೀವನಕ್ಕೆ ಸಿದ್ಧತೆ ಹೇಗೆ?, ನೋವಿನ ಮಂಡಿ, ಆತ್ಮಹತ್ಯೆ: ಕಾರಣ-ಪರಿಹಾರ, ಸ್ವಸ್ಥ ಮನಸ್ಸು, ಸ್ವಸ್ಥ ಆರೋಗ್ಯ’ ಅಲ್ಲದೆ ಇಂಗ್ಲಿಷ್‌ನಲ್ಲಿ ‘World Days to Remember Suicides -Problems and Solutions s’ ಮುಂತಾದ 30ಕ್ಕೂ ಕೃತಿಗಳನ್ನು ರಚಿಸಿದ್ದಾರೆ. 1988ರಲ್ಲಿ ಸಂವಹನ ಅಧ್ಯಯನಕ್ಕಾಗಿ ಬ್ರಿಟಿಷ್ ಕೌನ್ಸಿಲ್ ಫೆಲೋಷಿಪ್ ಪಡೆದು ಇಂಗ್ಲೆಂಡ್, ಸ್ಕಾಟ್ಲೆಂಡ್ಗಳಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಪ್ರಕಾಶನ ಸಂಸ್ಥೆಗಳಲ್ಲಿ ಅಧ್ಯಯನ. ಪ್ರಸ್ತುತ ’ವಾಯ್ಸ್ ಆಫ್ ಇಂಡಸ್ಟ್ರಿ’ ಎಂಬ ಕನ್ನಡ-ಇಂಗ್ಲಿಷ್ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಣೆ.